ಉಪ್ಪಾ-ಮಲಬಾರ್ ಗೋಲ್ಡ್ ಪುರಸ್ಕಾರಕ್ಕೆ ಛಾಯಾಗ್ರಾಹಕ ಜಯಕರ ಸುವರ್ಣ ಆಯ್ಕೆ
Update: 2019-09-25 19:02 IST
ಉಡುಪಿ, ಸೆ.25: ವಿಶ್ವಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಉಡುಪಿ ಪ್ರೆಸ್ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನೀಡುವ ಉಪ್ಪಾ- ಮಲಬಾರ್ ಗೋಲ್ಡ್ ಪುರಸ್ಕಾರಕ್ಕೆ ಉಡುಪಿಯ ಖ್ಯಾತ ಛಾಯಾಗ್ರಾಹಕ ಜಯಕರ ಸುವರ್ಣ ಆಯ್ಕೆಯಾಗಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಜಯಕರ ಸುವರ್ಣ, ಆದಿಉಡುಪಿಯ ಸುವರ್ಣ ಸ್ಟುಡಿಯೋದ ಮಾಲಕ. ದೂರದರ್ಶನದ ವರದಿಗಾರರಾಗಿಯೂ ಕಾರ್ಯನಿರ್ವಹಿಸುತ್ತಿರುವ ಇವರು ಉಡುಪಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನಲ್ಲೂ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಶುಕ್ರವಾರ ಮಲಬಾರ್ ಗೋಲ್ಡ್ ಶೋರೂಮ್‌ನಲ್ಲಿ ನಡೆಯುವ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಸಂದರ್ಭದಲ್ಲಿ ಜಯಕರ ಸುವರ್ಣರಿಗೆ ‘ಛಾಯಾಸ್ಪೂರ್ತಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಉಪ್ಪಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.