ಸೆ.26: ಕರಾವಳಿಯಲ್ಲಿ ಆರೆಂಜ್ ಅಲರ್ಟ್
Update: 2019-09-25 19:54 IST
ಮಂಗಳೂರು, ಸೆ.25: ಕರಾವಳಿ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕ್ಷೀಣಿಸಿದ್ದ ಮಳೆಯು ಬುಧವಾರ ಸಂಜೆಯಿಂದ ಮತ್ತೆ ಚುರುಕುಗೊಂಡಿದ್ದು, ಸೆ.26ರ ಗುರುವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿವೆ. ಅಲ್ಲದೆ ‘ಆರೆಂಜ್ ಅಲರ್ಟ್’ ಘೋಷಿಸಿದೆ.
ಗುರುವಾರ ಕರಾವಳಿ ಭಾಗದಲ್ಲಿ ಸುಮಾರು 115.6 ಮಿಮೀನಿಂದ 204.4. ಮಿಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಭಾಗದಲ್ಲಿ ಈ ಭಾರಿ ಮುಂಗಾರು ಸಾಧಾರಣವಾಗಿತ್ತು. ಜೂ.1ರಿಂದ ಈವರೆಗೆ ದ.ಕ.ಜಿಲ್ಲೆಯಲ್ಲಿ 3,345.70 ಮಿಮೀ ವಾಡಿಕೆಯ ಮಳೆಯಲ್ಲಿ 3,265.37 ಮಿಮೀ ಮಳೆಯಾಗಿ ಶೇ.2 ಮಳೆಯ ಕೊರತೆ ಇದೆ. ಆದರೆ ಕರಾವಳಿ ಭಾಗದಲ್ಲಿ ವಾಡಿಕೆಗಿಂತ 26 ರಷ್ಟು ಮಳೆಯ ಪ್ರಮಾಣ ಹೆಚ್ಚಳವಾಗಿದೆ. ವಾಡಿಕೆಯಂತೆ ಈ ತಿಂಗಳ ಅಂತ್ಯಕ್ಕೆ ಮುಂಗಾರು ಕೊನೆಗೊಳ್ಳಲಿದೆ ಎಂದು ಹವಾಮಾನ ಇಲಾಖೆಯ ಪ್ರಕಟನೆ ತಿಳಿಸಿದೆ.