×
Ad

ಮಾನವ ಕುಲದ ಉಳಿವಿಗೆ ಸಾಗರಗಳ ರಕ್ಷಣೆ ಅಗತ್ಯ: ವಿಶ್ವಸಂಸ್ಥೆ

Update: 2019-09-25 19:56 IST

ಮೊನಾಕೊ (ಪ್ರಿನ್ಸಿಪಾಲಿಟಿ ಆಫ್ ಮೊನಾಕೊ), ಸೆ. 25: ಜಾಗತಿಕ ತಾಪಮಾನವು ಸಾಗರಗಳು ಮತ್ತು ಭೂಮಿಯ ಶೀತಲೀಕೃತ ಪ್ರದೇಶಗಳನ್ನು ನಾಶಗೊಳಿಸುತ್ತಿದೆ ಹಾಗೂ ಈ ಪ್ರಕ್ರಿಯೆ ಯಾವ ಪ್ರಮಾಣದಲ್ಲಿ ನಡೆಯುತ್ತಿದೆಯೆಂದರೆ ಅದು ಮಾನವ ಕುಲಕ್ಕೆ ನೇರವಾಗಿ ಬೆದರಿಕೆಯಾಗಿದೆ ಎಂದು ವಿಶ್ವಸಂಸ್ಥೆ ಬುಧವಾರ ಎಚ್ಚರಿಸಿದೆ.

ಕುಸಿಯುತ್ತಿರುವ ಮಂಜುಗಡ್ಡೆ ಹಾಳೆಗಳು, ಏರುತ್ತಿರುವ ಸಾಗರಗಳು, ಕರಗುತ್ತಿರುವ ಹಿಮನದಿಗಳು, ಸಾಗರದ ಮೃತ ವಲಯಗಳು, ವಿಷಯುಕ್ತ ಪಾಚಿಗಳು- ಇವುಗಳ ಪರಿಣಾಮದಿಂದಾಗಿ ಮೀನಿನ ಸಂಕುಲಗಳು ನಾಶಗೊಳ್ಳುತ್ತಿವೆ, ಸಿಹಿನೀರಿನ ನವೀಕರಣ ಮೂಲಗಳನ್ನು ಹಾಳುಗೆಡವುತ್ತಿವೆ ಹಾಗೂ ಸಾಗರಗಳಲ್ಲಿ ರೂಪುಗೊಳ್ಳುತ್ತಿರುವ ಭಯಾನಕ ಚಂಡಮಾರುತಗಳು ಪ್ರತಿ ವರ್ಷ ಹಲವಾರು ಬೃಹತ್ ನಗರಗಳ ಮೇಲೆ ದಾಂಧಲೆಗೈಯುತ್ತಿವೆ ಎಂದು ಹವಾಮಾನ ಬದಲಾವಣೆ ಕುರಿತ 195 ದೇಶಗಳ ಅಂತರ್‌ಸರಕಾರೀ ಸಮಿತಿಯ ವರದಿಯೊಂದು ತಿಳಿಸಿದೆ.

► 2050ರ ವೇಳೆಗೆ ಬೃಹತ್ ನಗರಗಳಲ್ಲಿ ಬೃಹತ್ ಪ್ರಾಕೃತಿಕ ವಿಕೋಪ

ಇಂಗಾಲದ ಡೈ ಆಕ್ಸೈಡ್ ಹೊರಸೂಸುವ ಪ್ರಮಾಣವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿದರೂ, 2050ರ ವೇಳೆಗೆ, ಜಗತ್ತಿನ ಹೆಚ್ಚಿನ ಕರಾವಳಿ ನಗರಗಳು ಮತ್ತು ಸಣ್ಣ ದ್ವೀಪ ರಾಷ್ಟ್ರಗಳು ಶತಮಾನಕ್ಕೊಮ್ಮೆ ಎದುರಿಸುತ್ತಿದ್ದ ಪ್ರಾಕೃತಿಕ ವಿಕೋಪಗಳನ್ನು ಪ್ರತಿ ವರ್ಷ ಎದುರಿಸುತ್ತವೆ ಎಂದು ಮೊನಾಕೊದಲ್ಲಿ ಬುಧವಾರ ಬಿಡುಗಡೆ ಮಾಡಲಾದ ವಿಶ್ವಸಂಸ್ಥೆಯ ವರದಿ ಎಚ್ಚರಿಸಿದೆ.

 ಈ ಶತಮಾನದ ಮಧ್ಯದ ವೇಳೆಗೆ, 100 ಕೋಟಿಗೂ ಅಧಿಕ ಜನರು ಚಂಡಮಾರುತ, ಬೃಹತ್ ಪ್ರವಾಹ ಮತ್ತು ಇತರ ಪಾಕೃತಿಕ ವಿಕೋಪಗಳಿಗೆ ಸುಲಭವಾಗಿ ತುತ್ತಾಗುವ ಪ್ರದೇಶಗಳಲ್ಲಿ ವಾಸಿಸಲಿದ್ದಾರೆ ಎಂದು ಹವಾಮಾನ ಬದಲಾವಣೆ ಕುರಿತ ಅಂತರ್‌ಸರಕಾರೀ ಸಮಿತಿಯ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News