ಜಾಗತಿಕವಾದಿಗಳಿಗಲ್ಲ, ದೇಶಭಕ್ತರಿಗೆ ಭವಿಷ್ಯವಿದೆ: ಟ್ರಂಪ್
Update: 2019-09-25 20:03 IST
ವಿಶ್ವಸಂಸ್ಥೆ, ಸೆ. 25: ವಿಶ್ವಸಂಸ್ಥೆಯಲ್ಲಿ ಮಂಗಳವಾರ ಮಾಡಿದ ಭಾಷಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವವ್ಯವಸ್ಥೆಯ ವಿರುದ್ಧ ಮತ್ತೊಮ್ಮೆ ದಾಳಿ ನಡೆಸಿದ್ದಾರೆ ಹಾಗೂ ‘ಜಾಗತಿಕವಾದಿಗಳು’ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.
‘‘ಭವಿಷ್ಯವು ದೇಶಭಕ್ತರಿಗೆ ಸೇರಿದೆ, ಜಾಗತಿಕವಾದಿಗಳಿಗಲ್ಲ’’ ಎಂದು ಟ್ರಂಪ್ ಹೇಳಿದರು.
‘‘ತಮ್ಮ ಪ್ರಜೆಗಳನ್ನು ರಕ್ಷಿಸುವ, ತಮ್ಮ ನೆರೆಯವರನ್ನು ಗೌರವಿಸುವ ಹಾಗೂ ಪ್ರತಿಯೊಂದು ದೇಶವನ್ನು ವಿಭಿನ್ನಗೊಳಿಸುವ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಸಾರ್ವಭೌಮ ಮತ್ತು ಸ್ವತಂತ್ರ ದೇಶಗಳು ಭವಿಷ್ಯ ಹೊಂದಿವೆ’’ ಎಂದರು.