×
Ad

ಭಟ್ಕಳ: ಮಗುವಿನ ಅಪಹರಣಕ್ಕೆ ಯತ್ನಿಸಿದ ಅಪರಿಚಿತ ವ್ಯಕ್ತಿ; ದೂರು ದಾಖಲು

Update: 2019-09-25 20:20 IST

ಭಟ್ಕಳ: ಮನೆಯಲ್ಲಿ ಮಲಗಿದ್ದ ಒಂದೂವರೆ ವರ್ಷದ ಮಗುವನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಣ ಮಾಡಲು ವಿಫಲ ಯತ್ನ ನಡೆಸಿದ್ದಾಗಿ ಮಗುವಿನ ಪಾಲಕರು ಇಲ್ಲಿನ ಸಹಾಯಕ ಪೊಲೀಸ್ ಅಧೀಕ್ಷಕರಿಗೆ ಲಿಖಿತ ದೂರೊಂದನ್ನು ನೀಡಿದ್ದು, ಮಗು ಅಪಹರಣಕಾರನನ್ನು ಕೂಡಲೇ ಗುರುತಿಸಿ ಬಂಧಿಸುವಂತೆ ವಿನಂತಿಸಿಕೊಳ್ಳಲಾಗಿದೆ. 

ಮದೀನಾ ಕಾಲೋನಿ ಜಾಮಿಯಾಬಾದ್ ರಸ್ತೆಯ ಬಾಫಕ್ಕಿ ವಿಲ್ಲಾದ ಹುಜೈಫಾ ಸೈಯ್ಯದ್ ಮುಹಮ್ಮದ್ ಎಂಬವರು ದೂರು ನೀಡಿದ್ದಾರೆ. 

ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ಮನೆಯಲ್ಲಿ ನನ್ನ ತಂಗಿಯ ಪಕ್ಕ ಮಲಗಿದ್ದ ಆಕೆಯ ಒಂದೂವರೆ ವರ್ಷದ ಮಗು ಫೈಝಾ ಎಂಬಾಕೆಯನ್ನು ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಅಪಹರಣ ಮಾಡಿಕೊಂಡು ಹೋಗುತ್ತಿರುವುದು ಗಮನಿಸಿದ್ದು, ಕೂಡಲೇ ಬೊಬ್ಬೆ ಹೊಡೆಯಲು ಪ್ರಾರಂಭಿಸಿದಾಗ ಮಗುವನ್ನು ಮನೆಯ ಕಂಪೌಂಡ್ ಗೋಡೆಯ ಬಳಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈತನನ್ನು ಕೂಡಲೇ ಪತ್ತೆ ಹಚ್ಚಿ ಸೂಕ್ತ ಕ್ರಮ ಜರಗಿಸಬೇಕೆಂದು ದೂರಿನಲ್ಲಿ ವಿನಂತಿಸಿಕೊಳ್ಳಲಾಗಿದೆ.

ಭಟ್ಕಳದಲ್ಲಿ ಒಂದು ತಿಂಗಳಿಂದ ಮಕ್ಕಳನ್ನು ಅಹರಣ ಮಾಡುವ ವದಂತಿಗಳು ಹರಿದಾಡುತ್ತಿದ್ದು, ಶಾಲೆಗೆ ಮಕ್ಕಳನ್ನು ಕಳುಹಿಸುವ ಪಾಲಕರು ಆತಂಕಿತರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News