ಕಾಪು ಪರಿಸರದಲ್ಲಿ ಹುಚ್ಚು ನಾಯಿ ಕಡಿತ: ಹಲವರಿಗೆ ಗಾಯ
Update: 2019-09-25 21:45 IST
ಕಾಪು: ಕಾಪು ಪುರಸಭಾ ವ್ಯಾಪ್ತಿಯಲ್ಲಿ ಬುಧವಾರ ಹಲವರಿಗೆ ಹುಚ್ಚು ನಾಯಿ ಕಡಿದು ಗಾಯಗೊಂಡ ಘಟನೆ ನಡೆದಿದೆ. ಬಳಿಕ ನಾಯಿಯನ್ನು ಕೋವಿಯಿಂದ ಗುಂಡಿಕ್ಕಿ ಕೊಲ್ಲಲಾಗಿದೆ.
ಇಲ್ಲಿನ ಕಾಪು, ಭಾರತ್‍ನಗರ, ಕಲ್ಯ ಪರಿಸರದಲ್ಲಿ ಬುಧವಾರ ಬೆಳಗ್ಗೆ ಹಲವರಿಗೆ ಹುಚ್ಚು ನಾಯಿಯಿಂದ ಕಡಿತಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಎಷ್ಟು ಮಂದಿ ಎಂದು ನಿಖರವಾಗಿ ತಿಳಿದುಬಂದಿದಲ್ಲ. ಕೆಲವು ಬೀದಿ ನಾಯಿಗಳಿಗೂ ಹುಚ್ಚು ನಾಯಿ ಕಡಿದಿದೆ. ನಾಯಿ ಕಡಿತಕ್ಕೊಳಗಾದವರ ಪೈಕಿ 4 ಮಂದಿ ಕಾಪು ಮತ್ತು ಇಬ್ಬರು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ತೆರಳಿ ಚುಚ್ಚು ಮದ್ದು ಪಡೆದಿದ್ದಾರೆ.