ಕಡಬ: ವಿನ್ಯಾಸ ಟೈಲರಿಂಗ್ ಸೆಂಟರ್ ಶುಭಾರಂಭ

Update: 2019-09-25 16:48 GMT

ಕಡಬ: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ರಹ್ಮಾನಿಯಾ ಟೌನ್ ಜುಮಾ ಮಸೀದಿ ಕಡಬ ಇವರ ವತಿಯಿಂದ ತೆರೆಯಲಾದ ವಿನ್ಯಾಸ ಟೈಲರಿಂಗ್ ಸೆಂಟರ್ ನ ಉದ್ಘಾಟನಾ ಸಮಾರಂಭವು ಮುಈನುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಡಬ ಸ.ಪ.ಪೂ ಕಾಲೇಜಿನ ಉಪಪ್ರಾಂಶುಪಾಲೆ ಡಾ.ವೇದಾವತಿ ಮಾತನಾಡಿ ‘ಮಹಿಳಾ ಸಬಲೀಕರಣದಲ್ಲಿ ಆರ್ಥಿಕ ಸಬಲೀಕರಣ ಬಹಳ ಮುಖ್ಯವಾದುದು. ಅದಕ್ಕೆ ಬೇಕಾಗುವ ತರಬೇತಿಯನ್ನು ನಿಮಗಿಲ್ಲಿ ನೀಡಲಾಗುತ್ತಿದ್ದು, ಈ ಮೂಲಕ ನೀವು ಬೆಳೆಯಲು ಟ್ಯಾಲೆಂಟ್ ಸಹಕರಿಸುತ್ತಿದೆ’ ಎಂದರು.

ವೇದಿಕೆಯಲ್ಲಿ ಟೈಲರಿಂಗ್ ಶಿಕ್ಷಕಿ ಸಜಿನ ರಝಾಕ್, ಆಸರೆ ವಿಮೆನ್ಸ್ ಫೌಂಡೇಶನ್‍ನ ಸದಸ್ಯೆ ಝೊಹರಾ ಉಳ್ಳಾಲ ಉಪಸ್ಥಿತರಿದ್ದರು. ಆಸರೆ ವಿಮೆನ್ಸ್ ಫೌಂಡೇಶನ್‍ನ ಉಪಾಧ್ಯಕ್ಷೆ ಹಾಗೂ ಸೆಂಟರ್ ಉಸ್ತುವಾರಿ ಆತಿಕಾ ರಫೀಕ್ ಸ್ವಾಗತಿಸಿ ಪ್ರಸ್ತಾವನೆಗೈದರು.

ಶರೀಅತ್ ಕಾಲೇಜು ವಿದ್ಯಾರ್ಥಿನಿಯರಾದ ಬೀಫಾತಿಮಾ ಖಿರಾಅತ್ ಪಠಿಸಿದರು ಹಾಗೂ ಸುಫೈರ ಧನ್ಯವಾದಗೈದರು. ಟ್ಯಾಲೆಂಟ್ ಗ್ರಾಜುವೇಟ್ ಎಸೋಸಿಯೇಷನ್‍ನ ಅಧ್ಯಕ್ಷೆ ಸಾರಾ ಮಸ್ಕುರುನ್ನಿಸಾ ಕಾರ್ಯಕ್ರಮ ನಿರೂಪಿಸಿದರು. ಕಡಬ ರಹ್ಮಾನಿಯಾ ಟೌನ್ ಮಸೀದಿಯ ಅಧ್ಯಕ್ಷ ಹಾಜಿ ಎಸ್ ಅಬ್ದುಲ್ ಖಾದರ್, ಉಪಾಧ್ಯಕ್ಷರಾದ ಮುಹಮ್ಮದ್ ಮುಸ್ಲಿಯಾರ್, ಸಯ್ಯದ್ ಹುಸೇನ್ ಹಾಜಿ, ಪ್ರಧಾನ ಕಾರ್ಯದರ್ಶಿ ಹಮೀದ್ ಹಾಜಿ ಕೆ.ಎಸ್, ಕಾರ್ಯದರ್ಶಿಗಳಾದ ಅಶ್ರಫ್ ಶೇಡಿಗುಂಡಿ, ಕೆ.ಎಂ ಹನೀಫ್ ಹಾಜಿ, ಸದಸ್ಯ ಕುಂಞಲಿ, ಟ್ಯಾಲೆಂಟ್ ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮದ ಸಂಘಟನೆಯಲ್ಲಿ ಸಹಕರಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News