ಮಂಗಳೂರು ದಸರಾ ಮೆರವಣಿಗೆ: ಅಶ್ಲೀಲ, ಏಕತೆಗೆ ಭಂಗ ತರುವ ಟ್ಯಾಬ್ಲೋಗಳಿಗೆ ಅವಕಾಶವಿಲ್ಲ

Update: 2019-09-25 16:59 GMT

ಮಂಗಳೂರು,ಸೆ.25: ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಮೂಲಕ ನಡೆಯುವ ಮಂಗಳೂರು ದಸರಾ ಮೆರವಣಿಯಲ್ಲಿ ಯಾವುದೇ ರೀತಿಯ ಅಶ್ಲೀಲ, ಏಕತೆ ಸೌಹಾರ್ದಕ್ಕೆ ಧಕ್ಕೆ ತರುವ, ಪ್ರೇಕ್ಷಕರಿಗೆ ಜೀವಭಯ, ಜೀವ ಹಾನಿಯಾಗುವ ಸಾಧ್ಯತೆ ಇರುವ ಟ್ಯಾಬ್ಲೊ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಈ ಕುರಿತು ಮಂಗಳೂರು ದಸರಾ ಉತ್ಸವ ಸಮಿತಿಯ ಅಧ್ಯಕ್ಷರು ಗುರುವಾರ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ನಡೆದ ಟ್ಯಾಬ್ಲೋ ಮತ್ತು ಮೆರವಣಿಗೆ ಸಮಿತಿಯ ಸದಸ್ಯರಿಗೆ ತಿಳಿಸಿದ್ದಾರೆ.

ಮೆರವಣಿಗೆಗಳಲ್ಲಿ ಪಾಲ್ಗೊಳ್ಳುವ ವಾಹನಗಳ ಮಾಲಕರು ಚಾಲಕರು ಸೂಕ್ತ ದಾಖಲೆಗಳನ್ನು ಹೊಂದಿರಬೇಕು. ಟ್ಯಾಬ್ಲೋ ತಂಡ ಇರುವ ತೆರೆದ ವಾಹನಗಳಲ್ಲಿ ವೇಷಧಾರಿಗಳು ಮಾತ್ರ ಇರಬೇಕು. ಭಾಗವಹಿಸುವ ತಂಡಗಳು ಅ.1ರೊಳಗೆ ಕಚೇರಿಯಲ್ಲಿ ಹೆಸರು ನೊಂದಾಯಿಸಬೇಕು. ನಿಯಮ ಉಲ್ಲಂಘಿಸಿದರೆ ಟ್ಯಾಬ್ಲೋ ತಂಡದ ಅಧ್ಯಕ್ಷರು ನೇರ ಹೊಣೆಗಾರರಾಗಿರುತ್ತಾರೆ. ಅ.8ರಂದು ಮಧ್ಯಾಹ್ನ 2 ಗಂಟೆಗೆ ಟ್ಯಾಬ್ಲೋ ತಂಡಗಳು ಮಣ್ಣ ಗುಡ್ಡೆ ಗುರ್ಜಿ ಬಳಿ ಹಾಜರಿರಬೇಕು ಎಂದು ಹೇಳಿದರು.

ಈ ಬಾರಿಯೂ ಕ್ಷೇತ್ರದ ನವೀಕರಣದ ರೂವಾರಿ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಮಂಗಳೂರು ದಸರಾ ನಡೆಯಲಿದೆ ಎಂದು ಆಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ ತಿಳಿಸಿದ್ದಾರೆ.

ಈ ಬಾರಿ ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ ಶಾರದೆ ಸೇರಿದಂತೆ ನವದುರ್ಗೆಯರ ಮೆರವಣಿಗೆ ಆರಂಭದಲ್ಲಿದ್ದು, ಇತರ ಟ್ಯಾಬ್ಲೋಗಳು ಅದರ ಹಿಂದೆ ಸಾಗಲಿವೆ ಆ ಕಾರಣದಿಂದ ಮೆರವಣಿಗೆಯಲ್ಲಿ ನವದುರ್ಗೆಯರ ಮೆರವಣೆಯನ್ನು ಸುಮಾರು 12 ಗಂಟೆಯ ಒಳಗೆ ಪೂರ್ಣಗೊಳಿಸಬಹುದು ಎಂದು ಸಂಘಟಕರಾದ ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News