×
Ad

ಉಡುಪಿ: ಮರಳಿಗಾಗಿ ಮೂರನೆ ದಿನವೂ ಮುಂದುವರೆದ ಧರಣಿ

Update: 2019-09-25 23:23 IST

ಉಡುಪಿ, ಸೆ.25: ಮರಳುಗಾರಿಕೆಯನ್ನು ಕೂಡಲೇ ಆರಂಭಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರು ಹಮ್ಮಿಕೊಳ್ಳಲಾದ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹ ಇಂದು ಮೂರನೇ ದಿನಕ್ಕೆ ಕಾಲಿರಿಸಿದೆ.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಮನ್ವಯ ಸಮಿತಿ ಸಂಚಾಲಕ ಸುರೇಶ್ ಕಲ್ಲಾಗರ ಮಾತನಾಡಿ, ಕಳೆದ ಮೂರು ದಿನದಿಂದ ಕಟ್ಟಡ ಕಾರ್ಮಿಕರು ಕೆಲಸ ವಿಲ್ಲದೇ ಇರುವುದರಿಂದ ಸಾಲ ಮಾಡಿಕೊಂಡು ಧರಣಿಯಲ್ಲಿ ಪಾಲ್ಗೊಳ್ಳುತ್ತಿ ದ್ದಾರೆ. ಆದರೆ ಜಿಲ್ಲಾಡಳಿತ ಈ ವಾರದೊಳಗೆ ಮರಳು ಕೊಡುವ ಬಗ್ಗೆ ಪ್ರಯತ್ನ ಮಾಡುತ್ತಿಲ್ಲ. ಸರಕಾರದ ಹಲವು ಕೆಲಸಗಳನ್ನು ಬದಿಗಿಟ್ಟು ಮರಳು ಸಮಸ್ಯೆ ಪರಿಹರಿಸಲು ಮೊದಲ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.

ಕಳೆದ 4 ವರ್ಷಗಳಿಂದ ಮರಳು ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಸುಳ್ಳು ಹೇಳುತ್ತಾ ಬಂದಿದ್ದಾರೆ. ಆದರೆ ಸಮಸ್ಯೆ ಈವರೆಗೆ ಪರಿಹಾರವಾಗಿಲ್ಲ. ರಾಜ್ಯ ಸರಕಾರಗಳು ಉಡುಪಿ ಜಿಲ್ಲೆಯ ಜನರನ್ನು ಕಡೆಗಣಿಸಿದೆ. ಇನ್ನು ಎರಡು ದಿನದಲ್ಲಿ ಜನರ ಕೈಗೆ ಮರಳು ಸಿಗದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಕುಂದಾಪುರ ಹೊಸಂಗಡಿ ಗ್ರಾಮದಲ್ಲಿ ಕೆಲಸವಿಲ್ಲದೆ ಚಿಕಿತ್ಸೆಯ ಖರ್ಚು ಭರಿಸಲಾಗದೆ ನಿನ್ನೆ ಆತ್ಮಹತ್ಯೆ ಮಾಡಿಕೊಂಡ ಕಟ್ಟಡ ಕಾರ್ಮಿಕ ತಿಮ್ಮಪ್ಪ ದಾಸ್ ಅವರಿಗೆ ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಧರಣಿಯಲ್ಲಿ ಮುಖಂಡರಾದ ಶೇಖರ ಬಂಗೇರ, ದಾಸ ಭಂಡಾರಿ, ದಯಾನಂದ ಕೋಟ್ಯಾನ್, ಅರುಣ್ ಕುಮಾರ್ ಗಂಗೊಳ್ಳಿ, ಚಿಕ್ಕ ಮೊಗವೀರ, ಗಣೇಶ ತೊಂಡೆಮಕ್ಕಿ, ಅಲೆಕ್ಸ್, ಸುಭಾಷ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News