×
Ad

ಅ.13ರಂದು ಜಪಾನಿನ ‘ಮಿಯಾವಾಕಿ ವನ’ ನಿರ್ಮಾಣಕ್ಕೆ ಚಾಲನೆ

Update: 2019-09-25 23:25 IST

ಉಡುಪಿ, ಸೆ.25: ಕಡಿಮೆ ಜಾಗದಲ್ಲಿ ಶೀಘ್ರವಾಗಿ ಬೆಳೆಯುವ ಹೆಚ್ಚು ಮರಗಳನ್ನು ನೆಡುವ ವಿಧಾನವಾಗಿರುವ ಜಪಾನಿನ ‘ಮಿಯಾವಾಕಿ ವನ’ವನ್ನು ಸಾವಯವ ಬದುಕು ತಂಡವು ಕರಾವಳಿಯಲ್ಲಿ ಮೊತ್ತ ಮೊದಲ ಬಾರಿಗೆ ಪರಿಚಯಿಸಲು ಮುಂದಾಗಿದೆ.

ಈಗಾಗಲೇ ಜಗತ್ತಿನ ಹಲವು ದೇಶಗಳು ಸೇರಿದಂತೆ ಭಾರತದ ಪಂಜಾಬ್, ಮುಂಬೈ, ಬೆಂಗಳೂರು ಮುಂತಾದ ಕಡೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ವಿಧಾನದಲ್ಲಿ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ 400 ಮರಗಳನ್ನು ನೆಡ ಬಹುದಾಗಿದೆ ಎಂದು ತಂಡದ ಸಂಯೋಜಕ ಮಹೇಶ್ ಶೆಣೈ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.

ಇದರಲ್ಲಿ ಎರಡು ಹಂತಗಳಿದ್ದು, ಮೊದಲೇ ಹಂತದಲ್ಲಿ ಗಿಡ ಮರ ನೆಡಲು ಬೇಕಾಗುವಂತಹ ಮಣ್ಣಿನ ವಿಶೇಷ ಪದರವನ್ನು ರಚಿಸುವುದು ಮತ್ತು ಎರಡನೆ ಹಂತದಲ್ಲಿ ಸಸಿಗಳನ್ನು ನೆಡುವುದಾಗಿದೆ. ಪ್ರಾಯೋಗಿಕವಾಗಿ ಕಟಪಾಡಿಯ ಪೊಸಾರು ಎಂಬಲ್ಲಿ ಅ.13ರಂದು ಮಣ್ಣಿನ ವಿಶೇಷ ಪದರ ರಚನೆಗೆ ಚಾಲನೆ ನೀಡಲಾಗುವುದು ಎಂದರು.

ಈ ವನದಲ್ಲಿ ನೆಲ್ಲಿಕಾಯಿ, ಸಾಗುವಾನಿ ಸೇರಿದಂತೆ 17 ಜಾತಿಯ ಗಿಡಗಳನ್ನು ನೆಡಲಾಗುವುದು. ಎರಡನೆ ಹಂತದಲ್ಲಿ ಡಿಸೆಂಬರ್ ತಿಂಗಳ ಎರಡನೆ ವಾರದಲ್ಲಿ ಎರಡು ಸೆಂಟ್ಸ್ ಜಾಗದಲ್ಲಿ 260 ಸಸಿಗಳನ್ನು ನೆಡುವ ಉದ್ದೇಶ ಹೊಂದ ಲಾಗಿದ್ದು, ಇದಕ್ಕೆ 260 ಮಂದಿ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಗಳನ್ನು ಆಹ್ವಾನಿಸಿ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲಪಾಡಿ, ರವಿ ಕಟಪಾಡಿ, ನಿತ್ಯಾನಂದ ಒಳಕಾಡು, ಗಣೇಶ್ಾಜ್ ಸರಳಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News