ಉದ್ಯಾವರ ಐಸಿವೈಎಂ ಸುವರ್ಣ ಮಹೋತ್ಸವದ ಅಧ್ಯಕ್ಷರಾಗಿ ಮೈಕಲ್ ಡಿಸೋಜ
ಉಡುಪಿ, ಸೆ.25: ಭಾರತೀಯ ಕಥೊಲಿಕ್ ಯುವ ಸಂಚಲನ(ಐಸಿವೈಎಂ) ಉದ್ಯಾವರ ಘಟಕದ ಸುವರ್ಣ ಮಹೋತ್ಸವದ ಸಂಭ್ರಮದ ವರ್ಷಕ್ಕೆ ನೂತನ ಕಾರ್ಯಕಾರಿ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಮೈಕಲ್ ಡಿಸೋಜ ಬೊಳ್ಜೆ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಆಧ್ಯಾತ್ಮಿಕ ನಿರ್ದೇಶಕರಾಗಿ ವಂ.ಫಾ.ಸ್ಟ್ಯಾನಿ ಬಿ.ಲೋಬೊ, ವಂ.ಫಾ. ರೊಲ್ವಿನ್ ಅರಾನ್ನ, ಗೌರವಾಧ್ಯಕ್ಷರಾಗಿ ನೊರ್ಬಟ್ ಕ್ರಾಸ್ತಾ, ಪ್ರಧಾನ ಕಾರ್ಯ ದರ್ಶಿ ಡೋರಾ ಆರೋಜಾ, ಉಪಾಧ್ಯಕ್ಷರಾಗಿ ವಿಲ್ಫ್ರೆಡ್ ಡಿಸೋಜ, ಲವಿನಾ ಮಾರ್ಟಿಸ್ ಉದ್ಯಾವರ, ಕೋಶಾಧಿಕಾರಿ ರೋಶನ್ ಕ್ರಾಸ್ತಾ, ಕಾರ್ಯದರ್ಶಿ ಗಳಾಗಿ ಉರ್ಬನ್ ಫೆರ್ನಾಂಡಿಸ್, ರೋಜಾಲಿಯಾ ಕಾರ್ಡೋಜ ಕೆಮ್ತೂರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರೊಯ್ಸ್ ಫೆರ್ನಾಂಡಿಸ್ ಕುತ್ಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಜೊನ್ ಗೋಮ್ಸ್ ಕೊರಂಗ್ರಪಾಡಿ, ಮಾಧ್ಯಮ ಮತ್ತು ಕಾರ್ಯಕ್ರಮಗಳ ಪ್ರಧಾನ ಸಂಚಾಲಕರಾಗಿ ಸ್ಟೀವನ್ ಕುಲಾಸೊ ಉದ್ಯಾವರ, ಲೆಕ್ಕ ತಪಾಸಣಾಧಿಕಾರಿ ಜೆನ್ ಪಿರೇರಾ ಉದ್ಯಾವರ, ಹಣಕಾಸು ಸಮಿತಿಯ ಮುಖ್ಯಸ್ಥರಾಗಿ ಮೆಲ್ವಿನ್ ನೊರೊನ್ನ, ಜೆರಾಲ್ಡ್ ಪಿರೇರ ಬೊಳ್ಜೆ, ಲಾರೆನ್ಸ್ ಡೇಸಾ ಬೋಳಾರ್‌ಗುಡ್ಡೆ, ಆಹ್ವಾನಿತ ಸದಸ್ಯರಾಗಿ ಐಸಿವೈಎಂ ಅಧ್ಯಕ್ಷ ರೊಯಲ್ ಕಾಸ್ತೆಲಿನೋ ಸಂಪಿಗೆನಗರ, ಕಾರ್ಯದರ್ಶಿ ಪ್ರಿಯಾಂಕಾ ಡಿಸೋಜ ಬೊಳ್ಜೆ, ಸಲಹೆಗಾರ ರಿತೇಶ್ ಡಿಸೋಜ, ನಿರ್ದೇಶಕರಾಗಿ ಜಾನ್ ಎಂ.ಡಿಸೋಜ, ಟೆರೆನ್ಸ್ ಪಿರೇರಾ ಬೊಳ್ಜೆ, ಮ್ಯಾಕ್ಸಿಂ ಡಿಸಿಲ್ವ ಬೊಳ್ಜೆ, ರೊನಾಲ್ಡ್ ಡಿಸೋಜ, ಹೆನ್ರಿ ಡಿಸೋಜ, ಆಲ್ವಿನ್ ಡಿಸೋಜ, ಮೀನಾ ಮಿನೇಜಸ್, ಜೆಫ್ರಿ ಕಾಸ್ತೆಲಿನೋ, ಡೊಲ್ಫಿ ಮಚಾದೋ, ಹೆನ್ರಿ ಡಿ ಅಲ್ಮೇಡ, ಐರಿನ್ ಪಿರೇರಾ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.