‘ಬಾಂಧವ್ಯ’ ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ
Update: 2019-09-25 23:33 IST
ಮಂಗಳೂರು, ಸೆ.25: ನಗರದ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಅರೆಹೊಳೆ ಪ್ರತಿಷ್ಠಾನದ ಸಹಯೋಗದೊಂದಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ‘ಬಾಂಧವ್ಯ’ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ಸ್ಪರ್ಧೆಯಲ್ಲಿ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರ ‘ಗೋಡೆಗಳು’ ಕಥೆ ಪ್ರಥಮ ಮತ್ತು ಅಕ್ಷಯ ಆರ್. ಶೆಟ್ಟಿ ಮಂಗಳೂರು ಅವರ ಕಥೆ ‘ಕೈಧಾರೆ’ ದ್ವಿತೀಯ ಬಹುಮಾನಕ್ಕೆ ಆಯ್ಕೆಯಾಗಿದೆ.
ಪ್ರಥಮ ಸ್ಥಾನಕ್ಕೆ 6,000 ರೂ.ನಗದು ಮತ್ತು ದ್ವಿತೀಯ ಸ್ಥಾನಕ್ಕೆ 4,000 ರೂ. ನಗದು ಪುರಸ್ಕಾರ ಒಳಗೊಂಡಿದೆ. ಅ.31ರಂದು ನಗರದ ಪಾದುವಾ ಕಾಲೇಜಿನಲ್ಲಿ ನಡೆಯಲಿರುವ ಅರೆಹೊಳೆ ಪ್ರತಿಷ್ಠಾನದ ‘ನಂದಗೋಕುಲ ದೀಪಾವಳಿ ಸಂಭ್ರಮ’ದಂದು ಬಹುಮಾನ ವಿತರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.