×
Ad

ಪುಣೆಯಲ್ಲಿ ಭಾರೀ ಮಳೆಗೆ 12 ಮಂದಿ ಬಲಿ

Update: 2019-09-26 11:53 IST

ಪುಣೆ, ಸೆ.26: ನಗರದಲ್ಲಿ ಬುಧವಾರ ತಡರಾತ್ರಿ ಸುರಿದ ಭಾರೀ ಮಳೆಗೆ 12 ಮಂದಿ ಮೃತಪಟ್ಟಿದ್ದು, ಗುರುವಾರ ಬೆಳಗ್ಗೆ ಮಳೆ ನಿಯಂತ್ರಣಕ್ಕೆ ಬಂದಿದೆ.

ಮಳೆ ಸಂಬಂಧಿ ಘಟನೆಯಲ್ಲಿ ಪುಣೆ ನಗರದಲ್ಲಿ ಏಳು ಹಾಗೂ ನಗರಕ್ಕೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿ 5 ಮಂದಿ ಮೃತಪಟ್ಟಿದ್ದಾರೆ. ನಾಪತ್ತೆಯಾಗಿರುವ ನಾಲ್ವರ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹಾಗೂ ಜಿಲ್ಲಾಡಳಿತ ದೃಢಪಡಿಸಿದೆ.

ನಗರದ ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ. ಪುಣೆ ಜಿಲ್ಲಾಧಿಕಾರಿ ನವಲ್‌ಕಿಶೋರ್ ರಾಮ್, ಪುಣೆಯ ಹಾಗೂ ಪುರಂದರ್, ಭೋರ್, ಬಾರಾಮತಿ ಹಾಗೂ ಹವೇಲಿ ತಾಲೂಕುಗಳ ಶಾಲಾ-ಕಾಲೇಜಿಗೆ ರಜೆ ನೀಡಲು ಆದೇಶಿಸಿದ್ದಾರೆ.

ಮೃತಪಟ್ಟವರ ಬಗ್ಗೆ ಶೋಕ ವ್ಯಕ್ತಪಡಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಸಾಧ್ಯವಿರುವ ಎಲ್ಲ ನೆರವು ನೀಡುವ ಭರವಸೆ ನೀಡಿದ್ದಾರೆ.

ಪುಣೆ ಹಾಗೂ ಬಾರಾಮತಿಯಲ್ಲಿ ತಲಾ 2 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ರಾಜ್ಯ ಸರಕಾರ ಅಣೆಕಟ್ಟಿನ ಮೇಲೆ ತೀವ್ರ ನಿಗಾ ಇಟ್ಟಿದೆ ಎಂದು ಫಡ್ನಿವಿಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News