ಸಾಲಿಗ್ರಾಮ ಪಪಂ: ಪೌರ ಕಾರ್ಮಿಕರ ದಿನಾಚರಣೆ
ಉಡುಪಿ, ಸೆ. 26: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಸೋಮವಾರ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯಾಧಿಕಾರಿ ಅರುಣ್ ಬಿ. ಪೌರ ಕಾರ್ಮಿಕರಿಗಾಗಿ ಆಯೋಜಿಸಲಾದ ಒಳಾಂಗಣ ಆಟೆಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಡಾ. ಪ್ರಕಾಶ್ ತೋಳಾರ್ ಪೌರ ಕಾರ್ಮಿಕರಿಗೆ ಮದ್ಯಪಾನ ಮತ್ತು ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯಾಧಿ ಕಾರಿಗಳು ಹಾಗೂ ಸದಸ್ಯರು ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ, ಪೌರಕಾರ್ಮಿಕರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ಕಾರ್ಕಡ ರಾಜು ಪೂಜಾರಿ, ಸಂಜೀವ ದೇವಾಡಿಗ, ರವೀಂದ್ರ ಕಾಮತ್, ಭಾಸ್ಕರ, ಶ್ಯಾಮ ಸುಂದರ ನಾಯರಿ, ಗಿರಿಜ, ರತ್ನ ನಾಗರಾಜ ಗಾಣಿಗ, ಸುಕನ್ಯಾ ಜೆ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು. ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಕಿರಿಯ ಆರೋಗ್ಯ ನಿರೀಕ್ಷಕಿ ಮಮತಾ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಪಿ. ಸ್ವಾಗತಿಸಿ, ವಂದಿಸಿದರು.