ಇಸ್ಲಾಮಿಕ್ ವೆಲ್ಫೇರ್ ಸೊಸೈಟಿ ಮಹಾಸಭೆ
Update: 2019-09-26 20:59 IST
ಉಡುಪಿ, ಸೆ.26: ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2018-19ನೆ ಸಾಲಿನ ವಾರ್ಷಿಕ ಮಹಾಸಭೆಯು ಸೆ.24ರಂದು ಉಡುಪಿ ಜಾಮಿಯಾ ುಸೀದಿಯ ಸಭಾಂಗಣದಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷ ಅಕ್ಬರ್ ಅಲಿ ಸೊಸೈಟಿಯ ಬಡ್ಡಿ ರಹಿತ ಸೇವೆ ಹಾಗೂ ಸಮಾಜಪರ ಚಟುವಟಿಕೆಗಳ ಕುರಿತು ಮಾತನಾಡಿದರು. ಸಲಹೆಗಾರ ನರಸಿಂಹ ಸ್ವಾಮಿ ಸಂದರ್ಭೋಚಿತವಾಗಿ ಮಾತನಾಡಿದರು.
ಸೊಸೈಟಿಯ ನಿರ್ದೇಶಕ ಅನ್ವರ್ ಅಲಿ ಕಾಪು ಸ್ವಾಗತಿಸಿದರು. ನಿಸಾರ್ ಅಹ್ಮದ್ ಸೂಚನಾ ಪತ್ರವನ್ನು ವಾಚಿಸಿದರು. ಕಾರ್ಯದರ್ಶಿ ಮುಹಮ್ಮದ್ ಆರಿಫ್ ವರದಿ ಹಾಗೂ ಯೋಜನೆಗಳನ್ನು ಸಭೆಯ ಮುಂದಿಟ್ಟರು. ನಿರ್ದೇಶಕ ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ ವಂದಿಸಿದರು. ಜಿ.ಎಂ.ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿದರು.