ಪಾಕ್, ಟರ್ಕಿ, ಮಲೇಶ್ಯದಿಂದ ಇಸ್ಲಾಮಿಕ್ ಟಿವಿ ಚಾನೆಲ್: ಇಮ್ರಾನ್

Update: 2019-09-26 15:48 GMT

  ನ್ಯೂಯಾರ್ಕ್, ಸೆ. 26: ತಪ್ಪು ಗ್ರಹಿಕೆಗಳನ್ನು ಸರಿಪಡಿಸಲು ಹಾಗೂ ಇಸ್ಲಾಮೊಫೋಬಿಯ ಒಡ್ಡಿರುವ ಸವಾಲುಗಳನ್ನು ಎದುರಿಸಲು ಇಂಗ್ಲಿಷ್ ಭಾಷೆಯ ಇಸ್ಲಾಮಿಕ್ ಟೆಲಿವಿಶನ್ ಚಾನೆಲೊಂದನ್ನು ಜಂಟಿಯಾಗಿ ಆರಂಭಿಸಲು ಪಾಕಿಸ್ತಾನ, ಟರ್ಕಿ ಮತ್ತು ಮಲೇಶ್ಯಗಳು ನಿರ್ಧರಿಸಿವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

 ಇಸ್ಲಾಮಿಕ್ ಚರಿತ್ರೆಯ ಬಗ್ಗೆ ಜಗತ್ತಿಗೆ ಮಾಹಿತಿ ನೀಡುವುದಕ್ಕಾಗಿ ಈ ಟೆಲಿವಿಶನ್ ಚಾನೆಲ್ ಮುಸ್ಲಿಮರ ಕುರಿತು ನಿರ್ಮಿಸಲಾದ ಚಿತ್ರಗಳು ಮತ್ತು ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಎಂದು ಅವರು ತಿಳಿಸಿದರು.

‘‘ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್, ಮಲೇಶ್ಯ ಪ್ರಧಾನಿ ಮಹಾತಿರ್ ಮುಹಮ್ಮದ್ ಮತ್ತು ನಾನು ಸಭೆಯೊಂದನ್ನು ನಡೆಸಿದೆವು ಹಾಗೂ ಇಸ್ಲಾಮೊಫೋಬಿಯ ಒಡ್ಡಿದ ಸವಾಲುಗಳನ್ನು ಎದುರಿಸುವುದಕ್ಕಾಗಿ ಮೀಸಲಾದ ಟಿವಿ ಚಾನೆಲೊಂದನ್ನು ಮೂರು ದೇಶಗಳು ಜಂಟಿಯಾಗಿ ಆರಂಭಿಸುವ ಬಗ್ಗೆ ನಿರ್ಧರಿಸಿದೆವು’’ ಎಂದು ಇಮ್ರಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News