ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾಶೆಟ್ಟಿ ಭೇಟಿ
Update: 2019-09-26 22:40 IST
ಬಜ್ಪೆ: ತುಳುನಾಡಿನ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬಾಲಿವುಡ್ ಚಲನಚಿತ್ರ ನಟಿ ಶಿಲ್ಪಾಶೆಟ್ಟಿ ಭೇಟಿ ನೀಡಿ, ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಕಟೀಲು ದೇವಳದ ವತಿಯಿಂದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ದೇವಿಯ ಶೇಷವಸ್ತ್ರ ನೀಡಿ ಗೌರವಿಸಿದರು. ಅರ್ಚಕ ಹರಿನಾರಾಯಣ ದಾಸ ಅಸ್ರಣ್ಣ ಹಾಗೂ ದೇವಳದ ಸಿಬ್ಬಂದಿ ವರ್ಗ ಸ್ವಾಗತಿಸಿದರು.