×
Ad

ಮಂಗಳೂರು ವಿವಿ ಮಟ್ಟದ 39ನೇ ಅಂತರ್ ಕಾಲೇಜು ಕ್ರೀಡಾಕೂಟ

Update: 2019-09-26 22:43 IST

ಮೂಡುಬಿದಿರೆ: ಕ್ರೀಡೆಯೂದೈಹಿಕ, ಸಾಮಾಜಿಕ ಮಾನಸಿಕ ಸಾಮಥ್ರ್ಯವನ್ನು ವೃದ್ಧಿಸುವುದರಜೊತೆಗೆ ವೈಕ್ತಿತ್ತ್ವ ವಿಕಾಸನಗೊಳಿಸುತ್ತದೆ. ಕ್ರೀಡಾಕ್ಷೇತ್ರದಲ್ಲಿ ಸೋಲು ಮತ್ತು ಗೆಲುವು ಸಹಜ. ಅವುಗಳು ಜೀವನ ಪಾಠಕ್ಕೆ ಪೂರಕವಾಗಿರುತ್ತದೆ.ಜತೆಗೆ ಪ್ರೋತ್ಸಾಹಿಸುವ ಗುಣವನ್ನು ಕಲಿಯುತ್ತೇವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಎ. ಎಮ್‍ ಖಾನ್ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದದೈಹಿಕ ಶಿಕ್ಷಣ ವಿಭಾಗ ಹಾಗೂ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ 39ನೇ ಮಂಗಳೂರು ವಿಶ್ವವಿದ್ಯಾನಿಲಯದಇಂಟರ್‍ಕಾಲೇಜಿಯೇಟ್ ಮತ್ತು ಭಿನ್ನ ಸಾಮಥ್ರ್ಯದ ಮಕ್ಕಳ ಅಥ್ಲೆಟಿಕ್ಸ್ ಚ್ಯಾಂಪಿಯನ್‍ಶಿಪ್‍ನ್ನು ಉದ್ಘಾಟಿಸಿ ಮಾತನಾಡಿದರು.

ಆಳ್ವಾಸ್‍ನ ರಾಷ್ಟ್ರೀಯ ಸಾಧಕ ವಿದ್ಯಾರ್ಥಿಗಳಾದ ಚೈತ್ರಾದೇವಾಡಿಗ, ಅಮನ್‍ಅರುಣ್, ಮನು ಡಿ.ಪಿ, ಬಸವರಾಜ್‍ಕ್ರೀಡಾಜ್ಯೋತಿ ಬೆಳಗಿಸು ವುದರ ಮೂಲಕ ಚ್ಯಾಂಪಿಯನ್‍ಶಿಪ್‍ಗೆ ಚಾಲನೆ ನೀಡಿದರು.

ಕಾರ್ಯಕ್ರಮದಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಅಧ್ಯಕ್ಷಡಾ.ಎಂ ಮೋಹನ್ ಆಳ್ವ ವಹಿಸಿದ್ದರು.ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ಅಧ್ಯಾಪಕರ ಸಂಘದಅಧ್ಯಕ್ಷಜೇಮ್ಸ್, ಮಂಗಳೂರು ವಿಶ್ವವಿದ್ಯಾನಿಲಯದದೈಹಿಕ ಶಿಕ್ಷಣ ನಿರ್ದೇಶಕಡಾ.ಕಿಶೋರ್‍ಕುಮಾರ್ ಸಿ. ಕೆ ಉಪಸ್ಥಿತರಿದ್ದರು.

ಈ ಕ್ರೀಡಾಕೂಟಕ್ಕೆಮಂಗಳೂರು ವಿಶ್ವವಿದ್ಯಾಲಯಕ್ಕೆ ಒಳಪಟ್ಟ 68 ಕಾಲೇಜುಗಳಿಂದ 864 ವಿದ್ಯಾರ್ಥಿಗಳು ಹಾಗೂ 18 ವಿಶೇಷ ಶಾಲೆಗಳಿಂದ ಒಟ್ಟು270 ವಿದ್ಯಾರ್ಥಿಗಳು ಆಗಮಿಸಿದ್ದಾರೆ.

ಭಿನ್ನ ಸಾಮಥ್ರ್ಯ ಮಕ್ಕಳ ಪಥಸಂಚಲನದಲ್ಲಿ ಸೈಂಟ್‍ಆಗ್ನೇಸ್ ವಿಶೇಷ ಶಾಲೆ ಪ್ರಥಮ, ಉಡುಪಿಯ ಮಾನಸಾ ವಿಶೇಷ ಮಕ್ಕಳ ಶಾಲೆ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ಭಿನ್ನ ಸಾಮಥ್ರ್ಯ ಮಕ್ಕಳ ಹಾಗೂ ಕ್ರೀಡಾಕೂಟದಲ್ಲಿ ಸೈಂಟ್‍ಆಗ್ನೇಸ್ ಶಾಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರೆ, ಉಡುಪಿಯ ಮಾನಸಾ ವಿಶೇಷ ಮಕ್ಕಳ ಶಾಲೆ ರನ್ನರ್‍ಅಪ್ ಆಗಿ ಹೊರಹೊಮ್ಮಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News