×
Ad

ಸೆ.29ರಂದು ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ಉದ್ಘಾಟನೆ

Update: 2019-09-27 17:46 IST

ಮಂಗಳೂರು: ಬ್ಯಾಂಕ್‌ ಪರೀಕ್ಷೆಗಳು (ಐಬಿಪಿಎಸ್, ಎಸ್‌ಬಿಐ, ಆರ್‌ಬಿಐ ಗ್ರೇಡ್ ಬಿ), ಎಲ್‌ಸಿಐ ಎಎಓ, ಎಸ್‌ಎಸ್‌ಸಿ-ಸಿಜಿಎಲ್ ಸೇರಿದಂತೆ ನಾನಾ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ನೂತನ ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ಸ ಸೆ. 29ರಂದು ನಗರದ ದಿವ್ಯಾ ಎನ್‌ಕ್ಲೇವ್‌ನಲ್ಲಿ ಉದ್ಘಾಟನೆಗೊಳ್ಳಲಿದೆ.

ರವಿವಾರ ಬೆಳಗ್ಗೆ 9 ಗಂಟೆಗೆ ರಾಮಣ್ಣ ಶೆಟ್ಟಿ ಮತ್ತು ಶಂಕರಿ ಆರ್ ಶೆಟ್ಟಿ ಮುಗಿಪು, ಬೋಂದೆಲ್ ಅವರು ಸಂಸ್ಥೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಮಂಜುನಾಥ ಶೆಟ್ಟಿ ಮತ್ತು ಪುಷ್ಪಲತಾ ಎಂ ಶೆಟ್ಟಿ ಕಲಾಯಿತಿಮಾರು ಪೆರುವಾಯಿ ಇವರು ದೀಪ ಬೆಳಗಿಸಲಿದ್ದಾರೆ.

ನಗರದ ಖ್ಯಾತ ಚಾರ್ಟರ್ಡ್‌ ಅಕೌಂಟೆಂಟ್‌ ಬಿ. ಬಾಲಕೃಷ್ಣ ಶಾನುಭೋಗ್ ಮತ್ತು ಶಾಲಿನಿ ಶಾನುಭೋಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥರಾದ ರಕ್ಷಾ ಶಿವದುರ್ಗ ಶೆಟ್ಟಿ ಮತ್ತು ಟೀಮ್ ಶ್ಲಾಘ್ಯ ಮಂಗಳೂರು ತಿಳಿಸಿದ್ದಾರೆ.

ಮ್ಯಾಟ್, ಸಿಮ್ಯಾಟ್‌, ಕೆಮ್ಯಾಟ್‌ ಮತ್ತು ಪಿಜಿಸಿಇಟಿ, ಕ್ಯಾಂಪಸ್‌ ನೇಮಕಾತಿಗಾಗಿ ಆಪ್ಟಿಟ್ಯೂಡ್‌ ತರಬೇತಿ ಸೇರಿದಂತೆ ಹಲವು ಬಗೆಯ ತರಬೇತಿಗಳನ್ನು ಸಂಸ್ಥೆ ನುರಿತ ಶಿಕ್ಷಕರಿಂದ ಕೊಡಿಸಲಿದೆ.

ಬೆಳಗ್ಗೆ 7ರಿಂದ 8:30, 10ರಿಂದ 12 ಗಂಟೆ, ಅಪರಾಹ್ನ 2ರಿಂದ 4 ಮತ್ತು 4:30ರಿಂದ 6 ಹಾಗೂ 6:30ರಿಂದ ರಾತ್ರಿ 8 ಗಂಟೆ ವರೆಗೆ ಐದು ಬ್ಯಾಚ್‌ಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತರಬೇತಿಗಳಿಗೆ ಪ್ರವೇಶಾತಿ ಆರಂಭವಾಗಿದ್ದು ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0824-2950094 ಅಥವಾ ಮೊಬೈಲ್ ಸಂಖ್ಯೆ- 948196781 ಇಮೇಲ್ :shlaghya.mangaluru@gmail.com ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News