×
Ad

ವಿಟ್ಲ: ರಾಜ್ಯ ಸರಕಾರದ ವಿರುದ್ಧ ಎಸ್‍ಡಿಪಿಐ ಪ್ರತಿಭಟನೆ

Update: 2019-09-27 17:51 IST

ವಿಟ್ಲ, ಸೆ. 27: ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ವಿರುದ್ಧ ಎಸ್‍ಡಿಪಿಐ ವಿಟ್ಲ ವಲಯ ವತಿಯಿಂದ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್‍ನಲ್ಲಿ ಪ್ರತಿಭಟನಾ ಸಭೆ ಶುಕ್ರವಾರ ನಡೆಯಿತು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‍ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯ ಶಾಕೀರ್ ಅಳಕೆಮಜಲು, ದೇಶದ ಪ್ರಜಾಪ್ರಭುತ್ವಕ್ಕೆ ಕೇಂದ್ರದ ಮೋದಿ ಸರಕಾರ ಬೆಂಕಿ ಹಾಕಲು ಹೊರಟಿದೆ. ಜಮ್ಮು ಕಾಶ್ಮೀರದಲ್ಲಿ 14 ಸಾವಿರ ಮಂದಿ ಗೃಹಬಂಧನದಲ್ಲಿದ್ದಾರೆ. ಈ ಬಗ್ಗೆ ಜನತೆ ಅರ್ಥಮಾಡಿಕೊಳ್ಳಬೇಕು. ದೇಶದ ಆರ್ಥಿಕ ಪರಿಸ್ಥಿತಿ ಹೀನಾಯವಾಗಿದ್ದರೂ ಸರಕಾರ ತ್ರಿವಳಿ ತಲಾಕ್ 370 ವಿಧಿ ರದ್ದು ಮೊದಲಾದ ಕಾರ್ಯಗಳಿಗೆ ಕೈ ಹಾಕುತ್ತಿದೆ. ವಾಹನ ಮಸೂದೆ ಮೂಲಕ ಬಡವರನ್ನು ಲೂಟಿ ಮಾಡುತ್ತಿದೆ ಎಂದರು.

ಹಿಂದೂ, ಮುಸ್ಲಿಮರು ದೇಶದಲ್ಲಿ ಸೌಹಾರ್ಧತೆಯಲ್ಲಿ ಬದುಕುತ್ತಿದ್ದಾರೆ. ಆದರೆ, ಸರಕಾಗಳು ಮಾತ್ರ ಅವರನ್ನು ಇಬ್ಬಾಗ ಮಾಡಲು ಹೊರಟಿದೆ. ಇದರ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದ ಅವರು, ನೆರೆಸಂತ್ರಸ್ತರಿಗೆ ಇದುವರೆಗೂ ಪರಿಹಾರ ಬಿಡುಗಡೆಗೊಳಿಸಿಲ್ಲ ಎಂದು ಆರೋಪಿಸಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಖಲಂದರ್ ಪರ್ತಿಪ್ಪಾಡಿ ಮಾತನಾಡಿಮ ದೇಶದಲ್ಲಿ ಏಕಮುಖ ಕಾಯಿದೆಗಳನ್ನು ಜಾರಿಗೊಳಿಸುವ ಮೂಲಕ ಜನರನ್ನು ವಂಚನೆ ಮಾಡುತ್ತಿದ್ದು, ದೇಶದ ಸಂವಿಧಾನವನ್ನು ರಕ್ಷಿಸಲು ಎಸ್ಡಿಪಿಐ ನಿರಂತರ ಹೋರಾಟ ನಡೆಸಲಿದೆ ಎಂದರು. 

ಈ ಸಂದರ್ಭ ಎಸ್ಡಿಪಿಐ ವಿಟ್ಲ ವಲಯ ಅಧ್ಯಕ್ಷ ರಹೀಂ ವಿಟ್ಲ, ಪಿಎಫ್‍ಐ ಮುಖಂಡ ಬಶೀರ್ ಕೊಳ್ನಾಡು, ಅಝೀಜ್ ಕಡಂಬು, ಹೈದರ್ ಅಲಿ ಕಡಂಬು, ಎಸ್‍ಡಿಪಿಐ ಮುಖಂಡ ಅಝೀಜ್ ಉರಿಮಜಲು, ಐಎಫ್‍ಎಫ್ ಸದಸ್ಯ ಹಮೀದ್ ಮೇಗಿನಪೇಟೆ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News