ಪಾಕ್ ಸಾಮಾಜಿಕ ಮಾಧ್ಯಮ ತಾರೆ ಹತ್ಯೆ ಪ್ರಕರಣ : ಸಹೋದರನಿಗೆ ಜೀವಾವಧಿ ಶಿಕ್ಷೆ

Update: 2019-09-27 14:32 GMT

ಮುಲ್ತಾನ್ (ಪಾಕಿಸ್ತಾನ), ಸೆ. 27: ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ತಾರೆ ಕಂದೀಲ್ ಬಲೂಚ್ ಕೊಲೆ ಪ್ರಕರಣದಲ್ಲಿ, ಆಕೆಯ ಸಹೋದರನ ವಿರುದ್ಧದ ಆರೋಪ ಶುಕ್ರವಾರ ಸಾಬೀತಾಗಿದೆ ಹಾಗೂ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ವೈಯಾರದ ಸೆಲ್ಫಿಗಳಿಂದ ಪ್ರಸಿದ್ಧಿಗೆ ಬಂದ ಕಂದೀಲ್‌ರನ್ನು 2016ರಲ್ಲಿ ಕುತ್ತಿಗೆ ಹಿಸುಕಿ ಕೊಲ್ಲಲಾಗಿತ್ತು. ಈ ಸೆಲ್ಫಿಗಳನ್ನು ಪಾಕಿಸ್ತಾನದಲ್ಲಿ ‘ಪ್ರಚೋದನಕಾರಿ’ ಎಂಬುದಾಗಿ ಭಾವಿಸಲಾಗಿತ್ತು.

ಕೊಲೆಗೆ ಸಂಬಂಧಿಸಿ ಆಕೆಯ ಸಹೋದರ ಮುಹಮ್ಮದ್ ವಸೀಮ್‌ನನ್ನು ಬಂಧಿಸಲಾಗಿತ್ತು.

ಕಂದೀಲ್ ಹತ್ಯೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು ಹಾಗೂ ಈ ‘ಗೌರವ ಹತ್ಯೆ’ಯ ಹೆಸರಿನಲ್ಲಿ ಮಾಡಲಾಗುವ ಅಗೌರವಯುತ ಕೊಲೆಗಳನ್ನು ನಿಲ್ಲಿಸಬೇಕೆಂಬ ಕೂಗು ಜೋರಾಗಿ ಕೇಳಿಬಂದಿತ್ತು.

ಮುಲ್ತಾನ್‌ನ ನ್ಯಾಯಾಲಯವೊಂದು ಈ ತೀರ್ಪು ನೀಡಿದೆ ಎಂದು ಹೇಳಿದ ಅಪರಾಧಿ ಪರ ವಕೀಲ, ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News