ಮಂಗಳೂರು ಆಟೋರಿಕ್ಷಾ, ಕಾರು ಚಾಲಕರ ಸಹಕಾರಿ ಸಂಘದ ಸಭೆ
ಮಂಗಳೂರು, ಸೆ.27: ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ 43ನೆ ವಾರ್ಷಿಕ ಮಹಾಸಭೆಯು ಜೆಪ್ಪು ಸೈಂಟ್ ಜೋಸೆಫ್ ಸೆಂಟಿನರಿ ಹಾಲ್‌ನಲ್ಲಿ ಇತ್ತೀಚೆಗೆ ಜರುಗಿತು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಸಂಘವು 41 ಕೋ.ರೂ. ವ್ಯವಹಾರ ನಡೆಸಿ 29,09,187.85 ರೂ. ನಿವ್ವಳ ಲಾಭ ಗಳಿಸಿದೆ. ಆರ್ಥಿಕ ವರ್ಷಕ್ಕೆ ಸಂಘವು ಶೇ.12 ಲಾಬಾಂಶ ವಿತರಿಸಿದೆ.
ಸಂಘದ ಸದಸ್ಯರ ಮಕ್ಕಳಿಗೆ ಎಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕವನ್ನು ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ಯಾರಾ ಮೆಡಿಕಲ್ ಕೋರ್ಸ್‌ನಲ್ಲಿ ರಾಜ್ಯದಲ್ಲೇ 2ನೆ ರ್ಯಾಂಕ್ ಪಡೆದ ತೇಜಸ್ವಿ ಮತ್ತು ಪವರ್ ಲಿಫ್ಟಿಂಗ್‌ನಲ್ಲಿ ಹಲವು ಬಹುಮಾನ ಒಡೆದ ರೊನಾಲ್ಡ್ ಲೋಬೋ ಹಾಗೂ ಹಿರಿಯ ಆಟೋ ಚಾಲಕರಾದ ಉನ್ನಿಕೃಷ್ಣನ್ ಅವರನ್ನು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿ. ಚೀಫ್ ರೀಜನಲ್ ಮ್ಯಾನೇಜರ್ ಎಂ.ವೇಣುಗೋಪಾಲ್, ಹಿರಿಯ ಮಾರಾಟ ಅಧಿಕಾರಿ ಪ್ರಸನ್ನ ಪೂಜಾರಿ, ಜೆಪ್ಪು ಸೈಂಟ್ ಜೋಸೆಫ್ ಚರ್ಚ್ ಸೆಮಿನರಿಯ ಧರ್ಮಗುರು ರೆ.ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಧರ್ಮಗುರು ರೆ.ಫಾ. ಐವನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ಸಂಘದ ಕಾರ್ಯದರ್ಶಿ ದಿನೇಶ್ ಕೆ. ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷರಾದ ಎಂ. ಚಂದ್ರಶೇಖರ್ ವಂದಿಸಿದರು. ಈ ಸಂದರ್ಭ ಸಂಘದ ನಿರ್ದೇಶಕರಾದ ಸಿರಿಎಲ್ ಡಿಸೋಜ, ರಾಜೇಶ್, ವಸಂತ ಶೆಟ್ಟಿ, ಬಿ. ಸಂಜೀವ ಒಕ್ಕಲಿಗ, ಗ್ರೇಗರಿ ವೇಗಸ್, ಬಬಿತಾ ಡಿಸೋಜ, ವಿದ್ಯಾ ವಿನಯ ತೋರಸ್, ಸದಾನಂದ, ಜೆರಾಲ್ಡ್ ಪಿಂಟೋ, ಪಿಯುಸ್ ಮೊಂತೆರೋ, ಹಬೀಬುಲ್ಲಾ, ಎಡ್ವರ್ಡ್ ಫೆರ್ನಾಂಡೀಸ್, ಜೇಮ್ಸ್ ಮಾಡ್ತಾ, ದಾಮೋದರ್, ರಾಘವ ಉಪಸ್ಥಿತರಿದ್ದರು. ಉಪಾಧ್ಯಕ್ಷ ಎಂ. ಚಂದ್ರಶೇಖರ್ ವಂದಿಸಿದರು.