ಸೌದಿಯಲ್ಲಿ 200 ಅಮೆರಿಕ ಸೈನಿಕರು, ಕ್ಷಿಪಣಿಗಳ ನಿಯೋಜನೆ
Update: 2019-09-27 22:03 IST
ವಾಶಿಂಗ್ಟನ್, ಸೆ. 27: ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗಳ ಹಿನ್ನೆಲೆಯಲ್ಲಿ, ಆ ದೇಶದ ರಕ್ಷಣೆಗಾಗಿ ಅಲ್ಲಿ 200 ಅಮೆರಿಕ ಸೈನಿಕರು ಮತ್ತು ಪ್ಯಾಟ್ರಿಯಟ್ ಕ್ಷಿಪಣಿಗಳನ್ನು ನಿಯೋಜಿಸಲಾಗುವುದು ಎಂದು ಅಮೆರಿಕ ಗುರುವಾರ ತಿಳಿಸಿದೆ.
ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳು ಹಾಗೂ ಆಕಾಶ ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಲ್ಲಿ ಬಳಸಲಾಗುವ ನಾಲ್ಕು ರೇಡಾರ್ ಸೆಂಟಿನೆಲ್‌ಗಳನ್ನು ಸೌದಿ ಅರೇಬಿಯದಲ್ಲಿ ನಿಯೋಜಿಸಲಾಗುವುದು ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.
ಸೌದಿ ಅರೇಬಿಯದ ಪ್ರಮುಖ ತೈಲ ಸಂಸ್ಥಾಪನೆಗಳ ಮೇಲೆ ನಡೆದ ದಾಳಿಯ ಬಳಿಕ ಆ ದೇಶದ ತೈಲ ರಫ್ತು ಅರ್ಧದಷ್ಟು ಕಡಿಮೆಯಾಗಿದೆ.