×
Ad

ಮೈಸೂರು ವಿಭಾಗದ ಮಟ್ಟದ ಕ್ರೀಡಾಕೂಟ: ತಲಪಾಡಿಯ ಫಲಾಹ್ ವಿದ್ಯಾಸಂಸ್ಥೆಯ ತಂಡ ರಾಜ್ಯಮಟ್ಟಕ್ಕೆ ಆಯ್ಕೆ

Update: 2019-09-27 22:04 IST

ಮಂಗಳೂರು, ಸೆ.27: ದ.ಕ.ಜಿಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಳ್ವಾಸ್ ಮಾಧ್ಯಮ ಪ್ರೌಢಶಾಲೆಯ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಶಾಲಾ ಫುಟ್‌ಬಾಲ್ ಪಂದ್ಯದಲ್ಲಿ ತಲಪಾಡಿ ಕೆ.ಸಿ.ರೋಡ್ ವಿದ್ಯಾನಗರದ ಫಲಾಹ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ತಂಡವು ಫೈನಲ್‌ನಲ್ಲಿ ಕೊಡಗು ತಂಡವನ್ನು ಸೋಲಿಸಿ ಶಿವಮೊಗ್ಗದಲ್ಲಿ ನಡೆಯುವ ರಾಜ್ಯಮಟ್ಟದ ಫುಟ್‌ಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ. 7ನೇ ತರಗತಿಯ ವಿದ್ಯಾರ್ಥಿ ಝಫಾನ್ ತಂಡದ ನಾಯಕನಾಗಿದ್ದರು.

ಇದೇ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ, ಪುತ್ತಿಲ ಸರಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಫಲಾಹ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿಯ ಮುಹಮ್ಮದ್ ಆಶಿರ್ (ಚಿನ್ನದ ಪದಕ), ಮುಹಮ್ಮದ್ ಮರ್ಝೂಖ್ (ಚಿನ್ನದ ಪದಕ), 10ನೇ ತರಗತಿಯ ಶುಹೈಬ್ (ಬೆಳ್ಳಿ ಪದಕ) ಹಾಗೂ 8ನೇ ತರಗತಿಯ ಮುಹಮ್ಮದ್ ಅಫ್ಸಾರ್(ಚಿನ್ನದ ಪದಕ) ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಉಳಿದಂತೆ ಹಸನ್ ಅಹ್ಮದ್ ಶಬೀರ್ (8ನೇ ತರಗತಿ -ಕಂಚಿನ ಪದಕ), ಹಾಫಿಲ್ (10ನೇ ತರಗತಿ-ಕಂಚಿನ ಪದಕ), ಇರ್ಫಾಝ್ (9ನೇ ತರಗತಿ-ಕಂಚಿನ ಪದಕ), ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಮುಹಮ್ಮದ್ ಶಂಸುದ್ದೀನ್ (9ನೇ ತರಗತಿ-ಕಂಚಿನ ಪದಕ) ಮತ್ತು ಶಹದ್ ಹುಸೈನ್ (10ನೇ ತರಗತಿ-ಕಂಚು) ಪದಕಗಳನ್ನು ಗೆದ್ದಿರುತ್ತಾರೆ.

ಫಲಾಹ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್ ಪಡುಬಿದ್ರಿ, ಮುಖ್ಯಶಿಕ್ಷಕಿಯರಾದ ಆಯಿಶಾ ಸಬೀನಾ ಕೈಸಿರಾನ್ (ಆಂಗ್ಲ ಮಾಧ್ಯಮ ಪ್ರೌಢಶಾಲೆ), ವಿದ್ಯಾ ಡಿಸೋಜ (ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ), ದೈಹಿಕ ಶಿಕ್ಷಣ ಶಿಕ್ಷಕರಾದ ಭರತ್ ಶೆಟ್ಟಿ ಮತ್ತು ಗಣೇಶ್ ಪ್ರಸಾದ್ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News