ಮೀನುಗಾರರಿಗೆ ಎಚ್ಚರಿಕೆ
Update: 2019-09-27 22:30 IST
ಉಡುಪಿ, ಸೆ.27: ರಾಜ್ಯ ಸರಕಾರವು ಸಮುದ್ರದಲ್ಲಿ ಕೆಲವೊಂದು ವಿಧದ ಹಾನಿಕಾರಕ ಮೀನುಗಾರಿಕಾ ಪದ್ಧತಿಗಳನ್ನು ನಿಷೇಧಿಸಿದೆ. ಆದರೂ ಸಹ ಇತ್ತೀಚಿನ ದಿನಗಳಲ್ಲಿ ಸಮುದ್ರದಲ್ಲಿ ನಿಷೇಧಿತ ಮೀನುಹಾರಿಕೆ ಪ್ರಮುಖವಾಗಿ ಬುಲ್‌ಟ್ರಾಲ್ ಹಾಗೂ ಫೇರ್‌ಟ್ರಾಲ್ ಮಾಡುತ್ತಿರುವುದಾಗಿ ದೂರುಗಳು ಸ್ವೀಕೃತವಾಗಿವೆ.
ಈ ಬಗ್ಗೆ ಇಂಡಿಯನ್ ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆ ಹಾಗೂ ಇಲಾಖಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶ ಪಾಲನೆಗೆ ತಿಳಿಸಲಾಗಿದೆ. ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.