ಕಾಪಿಕಾಡು ಉಮಾಮಹೇಶ್ವರಿ ಕ್ಷೇತ್ರಕ್ಕೆ ಶ್ರೀರಾಮುಲು ಭೇಟಿ

Update: 2019-09-27 17:22 GMT

ತೊಕ್ಕೊಟ್ಟು: ಕಾಪಿಕಾಡು ಶ್ರೀ ಉಮಾಮಹೇಶ್ವರಿ ಕ್ಷೇತ್ರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀ ರಾಮುಲು ಅವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಸಚಿವ ರಾಮುಲು ಅವರು ಶುಕ್ರವಾರ ಖಾಸಗಿ ಕಾರ್ಯಕ್ರಮದಲ್ಲಿ ಮಂಗಳೂರಿಗೆ ಬಂದಿದ್ದು, ಸಂಜೆ ಉಮಾಮಹೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ   ಪ್ರಾರ್ಥನೆ ಸಲ್ಲಿಸಿದರು. ಜಿ.ಪಂ ಸದಸ್ಯೆ ಧನಲಕ್ಷ್ಮಿ ಗಟ್ಟಿ ಮತ್ತು ಬಿಜೆಪಿ ಮುಖಂಡರಾದ ಚಂದ್ರಹಾಸ್ ಪಂಡಿತ್ ಹೌಸ್ ಅವರು ಸಚಿವರಲ್ಲಿ ಉಳ್ಳಾಲದಲ್ಲಿ ಉಲ್ಬಣಿಸಿರುವ ಡೆಂಗ್ ಜ್ವರಕ್ಕೆ ಕಡಿವಾಣ ಮತ್ತು ಡೆಂಗ್ ಜ್ವರದಿಂದ ಸಾವನ್ನಪ್ಪಿದ ಕುಟುಂಬದವರಿಗೆ ಸಾಂತ್ವನದ ಪರಿಹಾರ ನೀಡುವುದರ ಬಗ್ಗೆ ಮನವಿ ಮಾಡಿದರು.

ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಬೇಕಾದ ಅನುದಾನ, ಸವಲತ್ತುಗಳ‌ ಬಗ್ಗೆ ಇಲಾಖೆಯ ವರದಿ ತರಿಸಿ ಶೀಘ್ರವೆ ಮುಖ್ಯಮಂತ್ರಿಗಳಿಗೆ ಒಪ್ಪಿಸಲಾಗುವುದು.ಪೃಕೃತಿ ವಿಕೋಪ, ಸ್ವಚ್ಚತೆಯಿಲ್ಲದ ಕಾರಣ ಹಲವಾರು ಕಡೆಗಳಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಿಸಿವೆ. ದೆಹಲಿಯಲ್ಲಿ ಕೇಂದ್ರ ಆರೋಗ್ಯ ಮಂತ್ರಿಗಳು ಸಾಂಕ್ರಾಮಿಕ ರೋಗಗಳು ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಯೋಜನೆ ಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ.ರಾಜ್ಯದಲ್ಲೂ ಟಾಸ್ಕ್ ಪೋರ್ಸ್ ರೀತಿಯಲ್ಲಿ ಕಾರ್ಯಾಚರಿಸಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕೆಲಸ ಮಾಡೋದಕ್ಕೆ ಉಮಾಮಹೇಶ್ವರಿ ಅಮ್ಮನವರು ಶಕ್ತಿ ನೀಡಲಿ ಎಂದರು.

ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ ಶೇಖರ್, ಟ್ರಸ್ಟಿ ಈಶ್ವರ್ ಉಳ್ಳಾಲ್,ಪ್ರದಾನ ಕಾರ್ಯದರ್ಶಿ ದಿನೇಶ್ ಅತ್ತಾವರ್, ಕೋಶಾಧಿಕಾರಿ ರಘುರಾಮ್ ಶೆಟ್ಟಿ,ಪದಾಧಿಕಾರಿಗಳಾದ ದಿನೇಶ್ ರೈ ಕಳ್ಳಿಗೆ,ಗಣೇಶ್ ಕಾಪಿಕಾಡು ಬಿಜೆಪಿ ಮುಖಂಡರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಶೇಖರ್ ಉಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News