ಕಳವು ಪ್ರಕರಣ: ಸೊತ್ತು ಸಹಿತ ಆರೋಪಿ ಸೆರೆ
Update: 2019-09-27 22:56 IST
ವಿಟ್ಲ, ಸೆ. 27: ಪೆರಾಜೆ ಗ್ರಾಮದ ಗಡಿಯಾರದ ಮನೆಯಲ್ಲಿ ಜು. 2ರಂದು ನಡೆದ ಕಳವು ಪ್ರಕರಣದ ಆರೋಪಿಯನ್ನು ವಿಟ್ಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೇರಳ ಮಲಪ್ಪುರಂ ಜಿಲ್ಲೆಯ ನೀಲಂಬೂರು ತಾಲೂಕಿನ ವಂಡೂರು ಗ್ರಾಮದ ಕಾಪಿಲ್ ನಿವಾಸಿ ರಮ್ಶೀದ್ (32) ಬಂಧಿತ ಆರೋಪಿ. ಆರೋಪಿಯಿಂದ 140 ಗ್ರಾಂ ಬಂಗಾರವನ್ನು ಮತ್ತು ಮೊಬೈಲನ್ನು ವಶಪಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಜು. 2ರಂದು ಪೆರಾಜೆ ಗ್ರಾಮದ ಗಡಿಯಾರ ಸಮೀಪದ ಜೋಗಿಬೆಟ್ಟು ನಿವಾಸಿ ಮುಹಮ್ಮದ್ ರಫೀಕ್ ಎಂಬರಿಗೆ ಸೇರಿದ ಮನೆಯಲ್ಲಿ ಅಂದಾಜು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1.95 ಲಕ್ಷ ರೂ. ನಗದು ಕಳವಾಗಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.