ಎಎಸ್ಎಸ್ಐ ವತಿಯಿಂದ 'ಐಸಿಎಸ್ 2019' ಕಾರ್ಯ ಕ್ರಮ
ಮಂಗಳೂರು, ಸೆ. 27;ವೈದ್ಯಕೀಯ ವೆಚ್ಚವನ್ನು ಭರಿಸಲಾಗದೆ ಸಂಕಷ್ಟದಲ್ಲಿರುವ ದೇಶದ ಜನಸಾಮಾನ್ಯರ ಬಗ್ಗೆ ವೈದ್ಯರ ಸಂಘಟನೆಗಳು ಸಹಾಯ ಹಸ್ತ ನೀಡಲು ಮುಂದಾಬೇಕಾಗಿದೆ ಎಂದು ಸಮಾರಂಭದ ಮುಖ್ಯ ಅತಿಥಿ ನಿಟ್ಟೆ ವಿಶ್ವ ವಿದ್ಯಾನಿಲಯದ ಸಹ ಕುಲಾಧಿ ಪತಿ ಡಾ.ಎಂ. ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ.
ನಗರದ ಟಿಎಂಎಪೈ ಸಭಾಂಗಣದಲ್ಲಿಂದು ಎಎಸ್ಎಸ್ಐ ಸಂಘಟನೆಯ ವತಿಯಿಂದ ಹಮ್ಮಿಕೊಂಡ ಐಸಿಎಸ್ 2019 ಕಾರ್ಯ ಕ್ರಮ ವನ್ನುದ್ದೇಶಿಸಿ ಅವರು ಇಂದು ಮಾತನಾಡು ತ್ತಿದ್ದರು.
ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಗಳಾಗಿವೆ. ಆಧುನಿಕ ತಂತ್ರಜ್ಞಾನ ಮತ್ತು ಸಲಕರಣೆಗಳಿಂದ ಯುವ ವೈದ್ಯರು ಹಿಂದಿನ ವೈದ್ಯ ರಂತೆ ಹೆಚ್ಚು ಶ್ರಮಪಡದೆ ಕಾರ್ಯನಿರ್ವಹಿಸಬಹುದಾಗಿದೆ. ಆದರೆ ಯುವ ವೈದ್ಯರು ತಮ್ಮ ವ್ರತ್ತಿ ಧರ್ಮದಲ್ಲಿ ನೈತಿಕ ಮೌಲ್ಯಗಳನ್ನು ಉಳಿಸಿ ಕೊಂಡು, ಹಿರಿಯ ವೈದ್ಯರ ಅನುಭವ ಜ್ಞಾನವನ್ನು ಪಡೆದುಕೊಂಡರೆ ಇನ್ನಷ್ಟು ಉತ್ತಮ ಸಾಧನೆ ಮಾಡಬಹುದು. ದೇಶದ ದಲ್ಲಿ ಸಾಕಷ್ಟು ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಗಳು ದೊರೆಯದೆ ವಂಚಿತರಾಗಿರುವರಿಗೆ ಸಾಧ್ಯವಾಗುವಷ್ಟು ನೆರವು ನೀಡಬೇಕಾಗಿದೆ. ವೈದ್ಯ ರನ್ನು ದೇವರಿಗೆ ಸಮಾನ ಎಂದು ಭಾವಿಸಿದ ಜನರ ನಂಬಿಕೆಗೆ ಚ್ಯುತಿ ಬಾರದಂತೆ ಕಾರ್ಯನಿರ್ವ ಲಹಿಸಲು ವೈದ್ಯರಿಗೆ ಡಾ.ಶಾಂತರಾಮ ಶೆಟ್ಟಿ ಕರೆ ನೀಡಿದರು.
ಸಮಾರಂಭದಲ್ಲಿ ಇಸ್ರೊ ದ ಮಾಜಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಅತಿಥಿಯಾಗಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಎಐಸಿಸಿ ಐ ಅಧ್ಯಕ್ಷ ಡಾ.ಎಚ್.ಎಸ್.ಚಬ್ರ ವಹಿಸಿದ್ದರು. ವೇದಿಕೆಯಲ್ಲಿ ಎಎಸ್ಎಸ್ ಐಯ ನೂತನ ಅಧ್ಯಕ್ಷ ಡಾ.ಶಂಕರ ಆಚಾರ್ಯ, ಕಾರ್ಯದರ್ಶಿ ಡಾ.ಅಜಯ ಪ್ರಸಾದ್ ಶೆಟ್ಟಿ, ಸಂಘಟನಾ ಅಧ್ಯಕ್ಷ ಡಾ.ಮಹಾಬಲ ರೈ,ಕೆನರಾ ಸ್ಪೈನ್ ಪೋರಂ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಸಿ.ಬಲ್ಲಾಳ್ , ಕೆಎಸ್ ಎಸ್ ಎಸ್ ಅಧ್ಯಕ್ಷ ಡಾ.ಡಾಂಗ್ ಹೊ ಲಿ, ಮೊದಲಾದ ವರು ಉಪಸ್ಥಿತರಿದ್ದರು.