ಸುರತ್ಕಲ್: ಹೆದ್ದಾರಿ ದುರವಸ್ಥೆ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ
Update: 2019-09-28 19:40 IST
ಮಂಗಳೂರು, ಸೆ.28: ಕೇಂದ್ರ ಮತ್ತು ರಾಜ್ಯ ಸರಕಾರದ ಜನ ವಿರೋಧಿ ನೀತಿ ಹಾಗೂ ರಾಷ್ಟ್ರೀಯ ಹೆದ್ದಾರಿ ದುರವಸ್ಥೆಯನ್ನು ಖಂಡಿಸಿ ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾಕ್ಷೇತ್ರ ಸಮಿತಿಯ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿತು.
ಪಿಎಫ್‌ಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕಾಟಿಪಳ್ಳ ಮಾತನಾಡಿ ಕೇಂದ್ರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಿಂದ ಶ್ರಮಿಕ ವರ್ಗದ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕೂಡಲೇ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಕುಳಾಯಿ, ಎಸ್‌ಡಿಎಸಿಯು (ಆಟೋ ಯೂನಿಯನ್) ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ ಜನವಿರೋಧಿ ನೀತಿಗಳನ್ನು ಖಂಡಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಉತ್ತರ ವಿಧಾನಸಬಾ ಕ್ಷೇತ್ರಾಧ್ಯಕ್ಷ ಆಯಾಝ್ ಕೃಷ್ಣಾಪುರ, ಎಸ್‌ಡಿಟಿಯು ಜಿಲ್ಲಾ ಸಮಿತಿಯ ಸದಸ್ಯ ಇರ್ಫಾನ್ ಕಾನ ಮತ್ತಿತರರು ಪಾಲ್ಗೊಂಡಿದ್ದರು.