ಎಸ್‌ಬಿಎಸ್ ಜಿಲ್ಲಾ ಪ್ರತಿನಿಧಿ ಸಮಾವೇಶದ ಲೋಗೋ ಬಿಡುಗಡೆ
Update: 2019-09-28 19:42 IST
ಮಂಗಳೂರು, ಸೆ.28: ಸುನ್ನಿ ಶಿಕ್ಷಕರ ಸಂಘ ದ.ಕ.ಜಿಲ್ಲೆ (ಪಶ್ಚಿಮ) ಇದರ ಸುನ್ನೀ ಬಾಲ ಸಂಘದ ಪ್ರತಿನಿಧಿ ಸಮಾವೇಶ ಅಕ್ಟೋಬರ್ 12ರಂದು ಬಿ.ಸಿ.ರೋಡ್ ಸ್ಪರ್ಶಾ ಸಭಾಂಗಣದಲ್ಲಿ ನಡೆಯಲಿದೆ.
‘ನಮ್ಮ ಮಕ್ಕಳು ನಾಳೆಯ ಸಂಪತ್ತು’ ಎಂಬ ಘೋಷವಾಕ್ಯದೊಂದಿಗೆ ನಡೆಯುವ ಈ ಸಮಾವೇಶದ ಲೋಗೋವನ್ನು ನಗರದ ಪಡೀಲಿನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಶಿಕ್ಷಕ ಒಕ್ಕೂಟದ ಉಪಾಧ್ಯಕ್ಷ ಒಕೆ ಸಈದ್ ಮುಸ್ಲಿಯಾರ್ ಬಿಡುಗಡೆಗೊಳಿಸಿದರು.
ಈ ಸಮಾವೇಶದಲ್ಲಿ ಜಿಲ್ಲೆಯ ಪ್ರತಿ ಮದ್ರಸಗಳಿಂದ ನಿಗದಿತ 3 ಮಂದಿ ಭಾಗವಹಿಸಲಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ತರಗತಿಗಳು ನಡೆಯಲಿದೆ. ಜಿಲ್ಲಾಧ್ಯಕ್ಷ ಪಿ.ಎಂ.ಮುಹಮ್ಮದ್ ಮದನಿಯ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯಲಿದೆ. ಅಪರಾಹ್ನ 2:30ಕ್ಕೆ ಬಿ.ಸಿ. ರೋಡಿನಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಬಾಲ ಸಂಚಯನ ಜಾಥಾ ನಡೆಯಲಿದೆ ಎಂದು ಶಿಕ್ಷಕರ ಒಕ್ಕೂಟ ಜಿಲ್ಲಾ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಮುಸ್ಲಿಯಾರ್ ತಿಳಿಸಿದ್ದಾರೆ.