×
Ad

ಭಾರತದ ಮೇಲಿರುವ 88 ಲಕ್ಷ ಕೋಟಿ ರೂ. ಸಾಲದ ಹೊರೆ ಚಿಂತೆಗೀಡುಮಾಡುವಂತಿದೆ: ಕಾಂಗ್ರೆಸ್

Update: 2019-09-28 20:06 IST

ಹೊಸದಿಲ್ಲಿ,ಸೆ.28: ದೇಶದ ಆರ್ಥಿಕ ನಿಧಾನಗತಿಯನ್ನು ನಿಬಾಯಿಸಲು ಸಾಧ್ಯವಾಗದ ಸರಕಾರದಿಂದಾಗಿ 2019ರ ಮೊದಲ ವಿತ್ತೀಯ ತೈಮಾಸಿಕದಲ್ಲಿ ಭಾರತದ ಮೇಲೆ 88 ಲಕ್ಷ ಕೋಟಿ ರೂ. ಸಾಲದ ಹೊರೆ ಬಿದ್ದಿದ್ದು ಇದು ನಿಜವಾಗಿಯೂ ಚಿಂತೆಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಶನಿವಾರ ಆತಂಕ ವ್ಯಕ್ತಪಡಿಸಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಸಾಲದಲ್ಲಿ ನಾಲ್ಕು ಶೇ. ಏರಿಕೆಯಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಸಾಲದ ಬಗ್ಗೆ ಬಿಡುಗಡೆಯಾಗಿರುವ ಇತ್ತೀಚಿನ ಅಂಕಿಅಂಶದ ಪ್ರಕಾರ 2019ರ ಜೂನ್ ತಿಂಗಳಿಗೆ ಕೊನೆಯಲ್ಲಿ ಭಾರತದ ಸಾಲ 88.18 ಲಕ್ಷ ಕೋಟಿ ರೂ. ಆಗಿದೆ. ಇದು ಕಳೆದ ತ್ರೈಮಾಸಿಕಕ್ಕಿಂತ ಶೇ.4 ಪಟ್ಟು ಅಂದರೆ 3.5-4 ಲಕ್ಷ ಕೋಟಿ ರೂ. ಅಧಿಕವಾಗಿದೆ. ಇದು ನಿಜವಾಗಿಯೂ ಆತಂಕಕ್ಕೀಡುಮಾಡುತ್ತಿದೆ ಎಂದು ಸುಪ್ರಿಯಾ ತಿಳಿಸಿದ್ದಾರೆ. ದೇಶದ ಈಗಿನ ಆರ್ಥಿಕ ಕುಸಿತವನ್ನು ಸರಿಹಾದಿಗೆ ತರಲು ಸರಕಾರದ ಬಳಿ ಯಾವ ಯೋಜನೆಯೂ ಇದ್ದಂತೆ ಕಾಣುವುದಿಲ್ಲ. ಸರಕಾರ ಮತ್ತು ದೇಶದ ಕೇಂದ್ರ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯೆ ಸಂವಹನ ಕೊರತೆಯಿದೆ ಎಂದುವರು ತಿಳಿಸಿದ್ದಾರೆ.

ಸರಕಾರ ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡಿರಬಹುದು. ಆದರೆ ಮಾರುಕಟ್ಟೆಯಲ್ಲಿ ಹಣವಿಲ್ಲದಿರುವ ಕಾರಣ ಈ ಕ್ರಮ ಕಾರ್ಪೊರೇಟ್‌ಗಳು ಹೆಚ್ಚು ಹೂಡಿಕೆ ಮಾಡಲು ಪ್ರೇರೇಪಿಸುವುದಿಲ್ಲ ಎಂದು ಸುಪ್ರಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News