ಇಂಡಿಯನ್ ಸೋಷಿಯಲ್ ಫೋರಂ ತಬೂಕು ಪಶ್ಚಿಮ ವಲಯ ವತಿಯಿಂದ ಕಬಡ್ಡಿ ಪಂದ್ಯಾಟ

Update: 2019-09-28 14:44 GMT

ರಿಯಾದ್: ಇಂಡಿಯನ್ ಸೋಷಿಯಲ್ ಫೋರಂ ತಬೂಕು ಘಟಕ ಸೌದಿ ರಾಷ್ಟ್ರೀಯ ದಿನದ ಪ್ರಯುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು  ತಬೂಕಿನ ಅಲ್ ಮುಹೀಬ್ ಕ್ರೀಡಾಂಗಣದಲ್ಲಿ ನಡೆಯಿತು.

ಈ ಪಂದ್ಯಾಟದಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದವು. ಲೀಗ್ ಮಾದರಿಯಲ್ಲಿ ಜರುಗಿದ ಪಂದ್ಯಾಟದಲ್ಲಿ ಇಂಡಿಯನ್ ಸೋಷಿಯಲ್ ಫೋರಂ ತಬೂಕು (ಐಎಸ್ಎಫ್)ತಂಡ ಹಾಗು ನ್ಯೂ ಭಾರತ್ ಕೊಡಿಬೈಲ್ ತಂಡ ಫೈನಲ್ ಪ್ರವೇಶಿಸಿ ನ್ಯೂ ಭಾರತ್ ಕೊಡಿಬೈಲ್ ತಂಡವನ್ನು ಮಣಿಸುವ ಮೂಲಕ ಪ್ರಥಮ ಪ್ರಶಸ್ತಿಯನ್ನು ಇಂಡಿಯನ್ ಸೋಷಿಯಲ್ ಫೋರಂ ತಬೂಕು ತಂಡ ತನ್ನದಾಗಿಸಿ ಕೊಂಡಿತ್ತು.

ಪಂದ್ಯಾಕೂಟದಲ್ಲಿ ಪ್ರಥಮ ಸ್ಥಾನ ಹಾಗು ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಟ್ರೋಫಿ ಹಾಗು ವಿಶೇಷ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು. ಉತ್ತಮ ದಾಳಿಗಾರನಾಗಿ ಐಎಸ್ಎಫ್ ತಂಡದ ಅಝರ್ ಸುರತ್ಕಲ್, ಉತ್ತಮ ಹಿಡಿತಗಾರನಾಗಿ ನ್ಯೂ ಭಾರತ್ ಕೊಡಿಬೈಲ್ ತಂಡದ ಬಾತಿಷ್,  ಉತ್ತಮ ಆಲ್ ರೌಂಡರ್ ಆಗಿ ಐಎಸ್ಎಫ್ ತಂಡದ ಅಬ್ದುಲ್ ಮಜೀದ್ ವಿಟ್ಲ ಆಯ್ಕೆಯಾದರು.

ಪಂದ್ಯಾಕೂಟದ ಮುಖ್ಯ ಅತಿಥಿಗಳಾಗಿ ಅಬ್ದುಲ್ ಮಜೀದ್ ವಿಟ್ಲ , ಮಹಮ್ಮದ್ ಸಲೀಂ ಕಡಂಬು , ಉಮರ್ ವಳಚ್ಚಿಲ್, ಅಬ್ದುಲ್ ಲತೀಫ್ ಉಪ್ಪಿನಂಗಡಿ, ನಿಯಾಝ್ ಬಜ್ಪೆ ಹಾಗು ಶೇಕ್ ಅಬ್ದುಲ್ ರಹ್ಮಾನ್ ಪಲ್ಲಿಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಪಂದ್ಯಾಕೂಟವನ್ನು ಆಯೋಜಿಸಿದ  ಇಂಡಿಯನ್ ಸೋಷಿಯಲ್ ಫೋರಂ ತಬೂಕು ಘಟಕದ  ವ್ಯವಸ್ಥಾಪಕರನ್ನು ಅಭಿನಂದಿಸಲಾಯಿತು. ಅಲ್ಲದೇ ಫಾರೂಕ್ ಕೆಮ್ಮಾರ ಪಂದ್ಯಾಟವನ್ನು ನಿರೂಪಿಸಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News