×
Ad

ಅ.2ರಂದು ಕಬಡ್ಡಿ ಸಮಾಲೋಚನಾ ಸಭೆ

Update: 2019-09-28 21:01 IST

ಮಂಗಳೂರು, ಸೆ.28: ದ.ಕ. ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಹಾಗೂ ಕರ್ನಾಟಕ ಕಬಡ್ಡಿ ಸಂಸ್ಥೆ ವತಿಯಿಂದ ಕಬಡ್ಡಿ ಸಮಾಲೋಚನಾ ಸಭೆ ಅ.2ರಂದು ಬೆಳಗ್ಗೆ 10 ಗಂಟೆಗೆ ನಗರದ ಮೋತಿಮಹಲ್ ಹೊಟೇಲ್‌ನ ಹೀರಾ ಸಭಾಂಗಣದಲ್ಲಿ ನಡೆಯಲಿದೆ.

ಸಭೆಯಲ್ಲಿ ರಾಜ್ಯಾಧ್ಯಕ್ಷ ಪ್ರಸಾದ್‌ಬಾಬು ಹಾಗೂ ಕಾರ್ಯದರ್ಶಿ, ಅರ್ಜುನ ಪ್ರಶಸ್ತಿ ವಿಜೇತ, ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಹೊನ್ನಪ್ಪ ಸಿ. ಗೌಡ, ಮುಖ್ಯಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಕೆ.ವಿ. ಶೆಣೈ ಭಾಗವಹಿಸಲಿದ್ದಾರೆ.

ಖ್ಯಾತ ತಜ್ಞ ಡಾ.ಕೆ.ಶಾಂತಾರಾಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಭೆಯಲ್ಲಿ ರಾಷ್ಟ್ರೀಯ ಕೀಡ್ರಾಪಟುಗಳು ಪಾಲ್ಗೊಳ್ಳಲಿರುವರು ಎಂದು ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News