ಉಪ್ಪಿನಂಗಡಿ: ಮಹಿಳೆ ಸೇರಿ ಮೂವರಿಗೆ ತಂಡದಿಂದ ಹಲ್ಲೆ ; ದೂರು ದಾಖಲು
Update: 2019-09-28 21:40 IST
ಉಪ್ಪಿನಂಗಡಿ: ಮಹಿಳೆ ಸೇರಿದಂತೆ ಮೂವರಿಗೆ ತಂಡವೊಂದು ಹಲ್ಲೆ ನಡೆಸಿ, ಜೀವಬೆದರಿಕೆಯೊಡ್ಡಿದ ಘಟನೆ ತಣ್ಣೀರುಪಂಥ ಗ್ರಾಮದ ಕಲ್ಲೇರಿಯಲ್ಲಿ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲ್ಲೇರಿಯ ಉಮೇಶ್ ಸಾಲ್ಯಾನ್, ಅವರ ಪತ್ನಿ ಜ್ಯೋತಿ ಹಾಗೂ ಅವರ ಭಾವ ಪ್ರಶಾಂತ್ ಮೇಲೆ ಮೂವರ ತಂಡ ಶುಕ್ರವಾರ ಸಂಜೆ ಕಬ್ಬಿಣದ ರಾಡ್‍ನಿಂದ ಹಲ್ಲೆ ನಡೆಸಿ, ಜೀವಬೆದರಿಕೆಯೊಡ್ಡಿದ್ದು, ಈ ಬಗ್ಗೆ ಹಲ್ಲೆ ನಡೆಸಿದ ಕುಪ್ಪೆಟ್ಟಿಯ ಅಶ್ವಥ್, ಹರಿಪ್ರಸಾದ್, ಅವಿನ್ ಎಂಬವರ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಉಮೇಶ್ ಸಾಲ್ಯಾನ್ ದೂರು ನೀಡಿದ್ದಾರೆ.