ಜಿದ್ದಾ: ಹಿದಾಯ ಫೌಂಡೇಶನ್ ನಿಂದ 'ಎಚ್.ಎಫ್ ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿ' ಭಿತ್ತಿಪತ್ರ ಬಿಡುಗಡೆ

Update: 2019-09-28 16:39 GMT

ಜಿದ್ದಾ: ಹಿದಾಯ ಫೌಂಡೇಶನ್, ಜಿದ್ದಾ ಇದರ ವತಿಯಿಂದ ಮುಂದಿನ ತಿಂಗಳಲ್ಲಿ ನಡೆಯಲಿರುವ ಎಚ್.ಎಫ್  ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಭಿತ್ತಿಪತ್ರವನ್ನು ಅಝೀಝಿಯಾದ ತಾಝ ಗ್ರಿಲ್ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಅ.25 ರಂದು  ಜಿದ್ದಾದ ತೌಬಾ ಸ್ಟ್ರೀಟ್ ನ ಸಮೀಪವಿರುವ  ಜೆಟಿಪಿಎಲ್ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ.

ಸಾಮಾಜಿಕ ಧ್ಯೇಯಕ್ಕಾಗಿ ಹಿದಾಯ ಫೌಂಡೇಶನ್ ಈ ಪಂದ್ಯಾವಳಿಯನ್ನು ಹಮ್ಮಿಕೊಂಡಿದೆ. ಮಹಿಳೆಯರು ಮತ್ತು ಮಕ್ಕಳ ಸಬಲೀಕರಣದ ಉದ್ದೇಶದೊಂದಿಗೆ ಕೆಲಸ ಮಾಡುತ್ತಿರುವ ಹಿದಾಯ ಫೌಂಡೇಶನ್, ಬಡ ಕುಟುಂಬಗಳಿಗೆ ಆಹಾರ ಕಿಟ್ ಒದಗಿಸುವುದು, ಚಿಕಿತ್ಸಾ ಸೌಕರ್ಯ ಒದಗಿಸುವುದು, ಮನೆ ನಿರ್ಮಾಣ ಮತ್ತು ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ನೆರವು ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಶನ್ ನ ಅಧ್ಯಕ್ಷ ಜಾವೆದ್ ಕಲ್ಲಡ್ಕ ತಿಳಿಸಿದರು.

ಈ ಹಾರ್ಡ್ ಟೆನಿಸ್ ಬಾಲ್ ನಾಕೌಟ್ ಕ್ರಿಕೆಟ್ ಪಂದ್ಯಾವಳಿಯು ಹಗಲು ಮತ್ತು ರಾತ್ರಿ ನಡೆಯಲಿದ್ದು,  12 ತಂಡಗಳು ಇದರಲ್ಲಿ ಭಾಗವಹಿಸಲಿವೆ. ಪಂದ್ಯಾವಳಿಯ ಕುರಿತು ಮಾಹಿತಿಗಾಗಿ ಜಾಸಿಮ್ ಕಲ್ಲಡ್ಕ ( 009665454755385), ಅಸ್ಲಮ್ ಕೌಸರ್ (00966543017274) ಮೊಹಿದ್ದೀನ್ (00966557585269)  ಅವರನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ನವಾಝ್, ಇಕ್ಬಾಲ್ ಮಿರ್ಜಾ, ಅಝೀಝುದ್ದೀನ್ ಮತ್ತು ಮುಹಮ್ಮದ್ ಶರೀಫ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News