ಸೆ.30ರಂದು ‘ಆರ್. ಶೆಟ್ಟಿ’ ಚಲನಚಿತ್ರದ ಪೋಸ್ಟರ್ ಬಿಡುಗಡೆ
Update: 2019-09-28 22:18 IST
ಮಂಗಳೂರು, ಸೆ. 28: ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳು ಮಾಡುತ್ತಿರುವ ಕನ್ನಡ ಚಿತ್ರ ‘ಆರ್. ಶೆಟ್ಟಿ’ಯ ಮೊದಲನೆಯ ಪೋಸ್ಟರ್ ಬಿಡುಗಡೆ ಸೆ.30ರಂದು ಬೆಳಗ್ಗೆ 10ಕ್ಕೆ ದೇರಳಕಟ್ಟೆಯ ದೆ ಮರ್ಸಿದೆ ಅನಾಥಾಲಯದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕರಾದ ಆರ್ಯ ಡಿ.ಕೆ ಹೇಳಿದರು.
ಅವರು ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಲೇಜು ಜೀವನದ ಕತೆಯನ್ನು ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗುತ್ತಿದೆ. ಉಡುಪಿ ಹಾಗೂ ಮಂಗಳೂರು ಪ್ರದೇಶದಲ್ಲಿ ಈ ಚಿತ್ರೀಕರಣ ನಡೆಯಲಿದೆ ಎಂದರು.
ಈ ಸಂದರ್ಭ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಚಿತ್ರತಂಡದ ಆದೀಶ್ ಎ.ಕೆ, ರಮೇಶ್ ಆರ್ .ಬಿ ಉಪಸ್ಥಿತರಿದ್ದರು.