×
Ad

ಪಾಣೆಮಂಗಳೂರು: ನದಿಗೆ ಹಾರಿದ ತಾಯಿ, ಮಕ್ಕಳು; ಮಹಿಳೆ ಮೃತ್ಯು

Update: 2019-09-28 23:48 IST

ಬಂಟ್ವಾಳ: ತಮ್ಮ ಪುಟಾಣಿ ಮಗುವಿನೊಂದಿಗೆ ದಂಪತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ತಡರಾತ್ರಿ ಪಾಣೆಮಂಗಳೂರು ಸಮೀಪ ನಡೆದಿದೆ.

ಮಹಿಳೆಯನ್ನು ಗೂಡಿನಬಳಿ ಹಳೆಯ ಸೇತುವೆ ಬಳಿ ರಕ್ಷಿಸಿ, ಬಂಟ್ವಾಳ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ.

ಆಕೆಯ ಪತಿ ಮತ್ತು ಮಗುವಿಗಾಗಿ ಹುಡುಕಾಟ ಮುಂದುವರಿಸಲಾಗಿದೆ. ಸ್ಥಳೀಯ ಈಜುಗಾರರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. 

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ,  ನಗರ ಠಾಣೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ವೇಳೆ ದಂಪತಿಯೊಂದಿಗೆ ಸಾಕು ನಾಯಿ ಕೂಡ ಇದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ.

ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News