×
Ad

ರಾಜ್ಯದ ಬಿಜೆಪಿಯಯೊಳಗೆ ಕಲಹ ಇಲ್ಲ: ಮುರಳೀಧರ ರಾವ್

Update: 2019-09-29 13:48 IST

ಮಂಗಳೂರು, ಸೆ. 29: ರಾಜ್ಯದ ಬಿಜೆಪಿಯ ಯೊಳಗೆ ಕಲಹ ಇಲ್ಲ.ಯಡಿಯೂರಪ್ಪ ಬಿಜೆಪಿಯ ಹಿರಿಯ ನಾಯಕ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯದ ಬಿಜೆಪಿ ನಾಯಕರ ನಡುವೆ ಏನಾದರೂ ಭಿನ್ನಾಭಿಪ್ರಾಯ ಹೊಂದಿದ್ದಾರೆ ಅದು ಮನೆಯೊಳಗೆ ಇರುವ ಭಿನ್ನಾಭಿಪ್ರಾಯ ಇದ್ದಂತೆ. ಮುಂದಿನ ರಾಜ್ಯದ ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 15 ಕ್ಷೇತ್ರಗಳಲ್ಲೂ ಜಯಗಳಿಸಲಿದೆ. ಅದರಿಂದ ಪಕ್ಷದ ಒಗ್ಗಟ್ಟಿಗೆ ಹಾನಿಯಿಲ್ಲ. ಕಾಶ್ಮೀರದಲ್ಲಿ ಬಿಜೆಪಿ ನೀಡಿದ ಆಶ್ವಾಸನೆ ಯ ಪ್ರಕಾರ ಸಂವಿಧಾನದ 370 ವಿಧಿಯನ್ನು ರದ್ದು ಮಾಡಿದೆ. ಆದರೆ ಈ ಬಗ್ಗೆ ಕಾಂಗ್ರೆಸ್, ಕಮ್ಯೂನಿಸ್ಟ್‌ ಅಪಪ್ರಚಾರದಲ್ಲಿ ತೊಡಗಿದೆ. ಸತ್ಯ ವಿಷಯವನ್ನು ಜನರಿಗೆ ತಿಳಿಸಲು ಬಿಜೆಪಿ ದೇಶಾದ್ಯಂತ ಒಂದು ತಿಂಗಳ ಅಭಿಯಾನ ನಡೆಸಿದೆ ಎಂದು ಮುರಳೀಧರ ರಾವ್ ತಿಳಿಸಿದ್ದಾರೆ.

 ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ  ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಂಜೀವ ಮಠಂದೂರು, ಮಂಗಳೂರು ವಿಭಾಗ ಪ್ರಭಾರಿ  ಉದಯಕುಮಾರ್ ಶೆಟ್ಟಿ, ಶಾಸಕರುಗಳಾದ ಎಸ್ ಅಂಗಾರ,  ವೇದವ್ಯಾಸ ಕಾಮತ್,  ಹರೀಶ್ ಪೂಂಜಾ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸುದರ್ಶನ್, ಮಾಜಿ ವಿಧಾನ ಪರಿಷತ್ ಸದಸ್ಯರಾದ  ಮೋನಪ್ಪ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ರೈ,  ಬ್ರಿಜೇಶ್ ಚೌಟ, ಮಂಗಳೂರು ವಿಧಾನಸಭಾ ಕ್ಷೇತ್ರ ಮಂಡಲಾಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಪ್ರತಾಪ್ ಸಿಂಹ ನಾಯಕ್, ಶ್ರೀ ಜಿತೇಂದ್ರ ಕೊಟ್ಟಾರಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ ಹಾಗು ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News