ಹೊನ್ನಾಳ: ಎಸ್‌ಎಸ್‌ಎಫ್‌ನಿಂದ ಉಲಾಝ್ ಶಿಬಿರ
ಬ್ರಹ್ಮಾವರ, ಸೆ.30: ಎಸ್‌ಎಸ್‌ಎಫ್ ಬ್ರಹ್ಮಾವರ ಸೆಕ್ಟರ್ ವತಿಯಿಂದ ಉಲಾಝ್ ಶಿಬಿರ ಸೆ.28ರಂದು ಹೊನ್ನಾಳ ಖದೀಮಿ ಜಾಮಿಯ ಮಸೀದಿ ಹಾಲ್‌ನಲ್ಲಿ ಜರಗಿತು.
ಸೆಕ್ಟರ್ ಗೌರವ ಸಲಹೆಗಾರ ಸುಬುಹಾನ್ ಅಹಮದ್ ಹೊನ್ನಾಳ ಉದ್ಘಾಟಿಸಿ ದರು. ಸೆಕ್ಟರ್ ಅಧ್ಯಕ್ಷ ಶಂಶುದ್ದಿನ್ ರಂಗನಕೆರೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಡಿವಿಷನ್ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಸಹದಿ ದೊಡ್ಡಣಗುಡ್ಡೆ ಉಲಾ್ು ತರಗತಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ನಾಸೀರ್ ಭದ್ರಗಿರಿ, ಡಿವಿಷನ್ ಕೋಶಾಧಿಕಾರಿ ನಝೀರ್ ಸಾಸ್ತಾನ, ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಶಿಹಾಬ್ ರಂಗನಕೆರೆ, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸಿರಾಜ್ ಗಾಂಧಿನಗರ, ಉಪಾಧ್ಯಕ್ಷ ರಶೀದ್ ಸಾಸ್ತಾನ, ಕೋಶಾಧಿಕಾರಿ ರಶೀದ್ ಗಾಂಧಿನಗರ, ರಂಗನಕೆರೆ ಶಾಖಾಧ್ಯಕ್ಷ ಮುತ್ತಲಿಬ್, ಭದ್ರಗಿರಿ ಕಾರ್ಯದರ್ಶಿ ಶಾಹಿಲ್ ಕೆ.ಟಿ., ಹೊನ್ನಾಳ ಎಸ್‌ವೈಎ್ ನಾಯಕ ಹನೀಫ್ ಉಪಸ್ಥಿತರಿದ್ದರು.
ಸೆಕ್ಟರ್ ಉಪಾಧ್ಯಕ್ಷ ಇಬ್ರಾಹಿಂ ರಂಗನಕೆರೆ ಸ್ವಾಗತಿಸಿದರು. ಕಾರ್ಯದರ್ಶಿ ರಾಹಿದ್ ಹೊನ್ನಾಳ ವಂದಿಸಿದರು.