ಮಂಗಳೂರು: ‘ಶ್ಲಾಘ್ಯ ಇನ್‌ಸ್ಟಿಟ್ಯೂಟ್’ ಶುಭಾರಂಭ
ಮಂಗಳೂರು, ಸೆ.29: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ‘ಶ್ಲಾಘ್ಯ ಇನ್‌ಸ್ಟಿಟ್ಯೂಟ್’ ನಗರದ ಕೊಡಿಯಾಲ್‌ಬೈಲ್‌ನ ಕೆನರಾ ಕಾಲೇಜು ಮುಂಭಾಗದ ದಿವ್ಯಾ ಎನ್‌ಕ್ಲೇವ್ ಕಟ್ಟಡದ ಎರಡನೇ ಮಹಡಿಯಲ್ಲಿ ರವಿವಾರ ಶುಭಾರಂಭಗೊಂಡಿತು.
ರಾಮಣ್ಣ ಶೆಟ್ಟಿ ಮತ್ತು ಶಂಕರಿ ಆರ್.ಶೆಟ್ಟಿ ಮುಗಿಪು ಬೋಂದೆಲ್ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಪೆರುವಾಯಿ ಕಲಾಯಿತಿಮಾರು ಮಂಜುನಾಥ ಶೆಟ್ಟಿ ಮತ್ತು ಪುಷ್ಪಲತಾ ಎಂ.ಶೆಟ್ಟಿ ದೀಪ ಬೆಳಗಿಸಿದರು. ಲೆಕ್ಕಪರಿಶೋಧಕ ಬಿ.ಬಾಲಕೃಷ್ಣ ಶ್ಯಾನುಭೋಗ್ ಮತ್ತು ಶಾಲಿನಿ ಶ್ಯಾನುಭೋಗ್, ಸಮೀರ್ ಶೆಟ್ಟಿ, ಕಾವೇರಿ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಸಂಸ್ಥೆಯ ಮುಖ್ಯಸ್ಥ ರಕ್ಷಾ ಶಿವದುರ್ಗಾ ಶೆಟ್ಟಿ ಹಾಗೂ ಶಿವದುರ್ಗಾ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯಲ್ಲಿ ಬ್ಯಾಂಕ್ ಪರೀಕ್ಷೆಗಳು (ಐಬಿಪಿಎಸ್, ಎಸ್‌ಬಿಐ, ಆರ್‌ಬಿಐ ಗ್ರೇಡ್ ಬಿ) ಎಲ್‌ಐಸಿ, ಎಎಒ, ಎಸ್‌ಎಸ್‌ಸಿ-ಸಿಜಿಎಲ್, ಜತೆಗೆ ಮ್ಯಾಟ್, ಸಿಮ್ಯಾಟ್, ಕೆಮ್ಯಾಟ್ ಮತ್ತು ಪಿಜಿಸಿಇಟಿ, ಕ್ಯಾಂಪಸ್ ನೇಮಕಾತಿಗಳಿಗಾಗಿ ಆ್ಯಪ್ಟಿಟ್ಯೂಡ್ ತರಬೇತಿ ಸೇರಿದಂತೆ ಹಲವು ಬಗೆಯ ತರಬೇತಿಗಳನ್ನು ನುರಿತ ಶಿಕ್ಷಕರಿಂದ ಒದಗಿದಲಾಗುತ್ತದೆ.
ಬೆಳಗ್ಗೆ 7ರಿಂದ 8:30, 10ರಿಂದ 12ಗಂಟೆ, ಅಪರಾಹ್ನ 2ರಿಂದ 4 ಗಂಟೆ, ಮತ್ತು 4:30ರಿಂದ ಸಂಜೆ 6 ಹಾಗೂ 6:30ರಿಂದ ರಾತ್ರಿ 8 ಗಂಟೆಯ ಬ್ಯಾಚ್‌ಗಳಲ್ಲಿ ತರಬೇತಿ ನೀಡಲಾಗುತ್ತದೆ. ಪ್ರವೇಶಾತಿ ಆರಂಭವಾಗಿದ್ದು, ಮಾಹಿತಿಗೆ ದೂ.ಸಂ: 0824-2950094, 9481916781ನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.