ರಾಜ್ಯ ಸಮಸ್ತ ಹನೀಫೀ ಉಲಮಾ ಸಂಗಮ
ಮಂಗಳೂರು, ಸೆ.29:ಸಂಘಟನೆ, ಅಧಿಕಾರ ಯಾವುದೇ ಇರಲಿ, ಪ್ರತಿಯೊಬ್ಬರೂ ಧರ್ಮ ಹಾಗೂ ಸಮಾಜಕ್ಕಾಗಿ ನಿಸ್ವಾರ್ಥದಿಂದ ಸೇವೆಯಲ್ಲಿ ತೊಡಗಿಸಿಕೊಂಡಾಗ ಖಂಡಿತಾ ಯಶಸ್ಸು ಸಾಧ್ಯ ಎಂದು ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದ್ದಾರೆ.
ಮಂಗಳೂರಿನ ಸಮಸ್ತ ಸಭಾಭವನದಲ್ಲಿ ನಡೆದ ರಾಜ್ಯ ಹನೀಫಿ ಪದವೀಧರರ ಸಮಸ್ತ ಹನೀಫೀ ಉಲಮಾ ಸಂಗಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜನರಿಗೆ ಧರ್ಮದ ಒಳಿತಿನ ಸಂದೇಶ ತಲುಪಿಸುವ ಹೊಣೆಗಾರಿಕೆಯನ್ನು ಹೊತ್ತಿರುವ ಉಲಮಾಗಳು ಪ್ರತಿ ಮೊಹಲ್ಲಾಗಳಲ್ಲೂ ಕೆಡುಕಿನ ವಿರುದ್ಧ ನಿರಂತರ ಜಾಗೃತಿ ಮೂಡಿಸಬೇಕೆಂದು ತ್ವಾಖಾ ಅಹ್ಮದ್ ಮುಸ್ಲಿಯಾರ್ ಉಲಮಾಗಳಿಗೆ ಕರೆ ನೀಡಿದರು.
ಉಲಮಾ ಸಂಗಮವನ್ನು ಅಡ್ಯಾರ್ ಶರೀಅತ್ ಕಾಲೇಜ್‌ನ ಪ್ರಾಧ್ಯಾಪಕ ಅಬ್ದುಲ್ ರಝಾಕ್ ಹನೀಫಿ ಕಕ್ಕಿಂಜೆ ಉದ್ಘಾಟಿಸಿದರು. ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ನ ಕೇಂದ್ರೀಯ ಸಮಿತಿ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ , ದ.ಕ.ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ, ಬಜಾಲ್ ಮಸೀದಿಯ ಖತೀಬ್ ದಾವೂದ್ ಹನೀಫಿ ಅಡ್ಡೂರ್, ಬಜ್ಪೆ ಶಾಂತಿಗುಡ್ಡೆ ಮಸೀದಿಯ ಖತೀಬ್ ಇಬ್ರಾಹೀಂ ಫಾಝಿಲ್ ಹನೀಫಿ ಬುಡೋಳಿ, ಸಜೀಪ ಉಸ್ತಾದ್ ಶರೀಅತ್ ಕಾಲೇಜ್‌ನ ಪ್ರಾಂಶುಪಾಲ ಅಬ್ದುಲ್ ರಶೀದ್ ಹನೀಫಿ ಕಡಬ, ಅಮ್ಮೆಮ್ಮಾರ್ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ದಾರಿಮಿ ಬೆಳ್ಳಾರೆ, ಅತೂರು ಎಂಜೆಎಂ ಮಸೀದಿಯ ಖತೀಬ್ ಹನೀಫ್ ಹನೀಫಿ ತಿಂಗಳಾಡಿ, ಶಂಸುದ್ದೀನ್ ಹನೀಫಿ ಮರ್ಧಾಳ ಮಾತನಾಡಿದರು.
ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ಶರೀಅತ್ ಕಾಲೇಜ್‌ನ ಪ್ರಾಂಶುಪಾಲ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು. ದಾವೂದ್ ಹನೀಫಿ ಕಾಟಿಪಳ್ಳ ಕಿರಾಅತ್ ಪಠಿಸಿದರು.