×
Ad

‘ಪಟ್ಲ ಸಂಭ್ರಮ ದುಬೈ-2019’: ಆಮಂತ್ರಣ ಪತ್ರಿಕೆ ಬಿಡುಗಡೆ

Update: 2019-09-29 17:56 IST

ಮಂಗಳೂರು, ಸೆ.29: ದುಬೈಯ ಶೇಖ್ ರಶೀದ್ ಅಡಿಟೋರಿಯಂನ ಇಂಡಿಯನ್ ಸ್ಕೂಲ್‌ನಲ್ಲಿ ಅಕ್ಟೋಬರ್ 18ರಂದು ನಡೆಯಲಿರುವ ‘ಪಟ್ಲ ಸಂಭ್ರಮ ದುಬೈ-2019’ ಮತ್ತು ಯಕ್ಷಗಾನ ಅಭ್ಯಾಸ ತರಗತಿ, ಯಕ್ಷಗಾನ ಪ್ರದರ್ಶನದ ಆಮಂತ್ರಣ ಮತ್ತು ಪ್ರವೇಶ ಪತ್ರ ಬಿಡುಗಡೆಯು ದುಬೈ-ಗೀಸೈಸ್‌ನ ಫಾರ್ಚೂನ್ ಫ್ಲಾಝದಲ್ಲಿ ಇತ್ತೀಚೆಗೆ ಜರುಗಿತು.

 ದುಬೈ ಪಟ್ಲ ಘಟಕದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟಕದ ಗೌರವಾಧ್ಯಕ್ಷ ವೀನಸ್ ಗ್ರೂಪ್ ಮಾಲಕ ವಾಸುದೇವ ಭಟ್ ಪಟ್ಲ ಶುಭ ಹಾರೈಸಿ ಮಾತನಾಡಿದರು. ಮೋನಿ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಪ್ರವೇಶ ಪತ್ರ ಬಿಡುಗಡೆ ಮಾಡಿದರು. ಫೋರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಮಾಲಕ ಪ್ರವೀಣ್ ಶೆಟ್ಟಿ ಅತಿಥಿಯಾಗಿದ್ದರು.

ಕಾರ್ಯಕ್ರಮದ ಸಂಪೂರ್ಣ ವಿವರಗಳನ್ನು ಸಂಘಟಕ ಕೊಟ್ಟಿಂಜ ದಿನೇಶ ಶೆಟ್ಟಿ ಮತ್ತು ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಸಭೆಯ ಮುಂದಿ ಟ್ಟರು. ಉದ್ಯಮಿ ಗುಣಶೀಲ, ರವಿ ಶೆಟ್ಟಿಗಾರ್, ಬಾಲಕೃಷ್ಣ ಸಾಲಿಯಾನ್, ನೋವೆಲ್ ಅಲ್ಮೆಡ, ಲೊನಾಲ್ಡ್ ಡಿಸೋಜ, ವೆಂಕಟೇಶ ಶಾಸ್ತ್ರಿ ಪುತ್ತಿಗೆ ಉಪಸ್ಥಿತರಿದ್ದರು. ರಾಜೇಶ್ ಕುತ್ತಾರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News