ಭಟ್ಕಳ: ಮಾರ್ಕೆಟಿಂಗ್ ಸೂಸೈಟಿಯ ಕಿಟಕಿ ಮುರಿದು ಕಳ್ಳತನ
Update: 2019-09-29 18:14 IST
ಭಟ್ಕಳ: ತಾಲೂಕಿನ ಬಂದರ್ ರೋಡ್ ಸಮೀಪವಿರುವ ಮಾರ್ಕೆಟಿಂಗ್ ಸೊಸೈಟಿಯ ಕಿಟಕಿ ಮುರಿದು ಕಳ್ಳತನ ಮಾಡಿರುವ ಘಟನೆ ರವಿವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಕಿಟಕಿಯ ಸರಳು ಮುರಿದು ಒಳಗೆ ನುಗ್ಗಿರುವ ದುಷ್ಕರ್ಮಿಗಳು ನಾಲ್ಕು ಸಾವಿರ ರೂ. ನಗದನ್ನ ದೋಚಿದ್ದು, ಲೊಕರ್ ಒಡೆಯುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.