×
Ad

ನಾರದ ಪ್ರಕರಣ: ಬಿಜಿಪಿ ನಾಯಕ ಮುಕುಲ್ ರಾಯ್ ನಿವಾಸದಲ್ಲಿ ಬಂಧಿತ ಪೊಲೀಸ್ ಅಧಿಕಾರಿಯ ವಿಚಾರಣೆ

Update: 2019-09-29 19:37 IST

ಹೊಸದಿಲ್ಲಿ,ಸೆ.29: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ನಡೆಸಲಾದ ಕುಟುಕು ಕಾರ್ಯಾಚರಣೆಯಲ್ಲಿ ಬಂಧಿತನಾಗಿರುವ ಐಪಿಎಸ್ ಅಧಿಕಾರಿಯನ್ನು ರವಿವಾರದಂದು ಪ್ರಕರಣದ ಆರೋಪಿ ಬಿಜೆಪಿ ನಾಯಕ ಮುಕುಲ್ ರಾಯ್ ಅವರ ನಿವಾಸಕ್ಕೆ ಕೊಂಡೊಯ್ದು ಅಲ್ಲಿ ಅಪರಾಧವನ್ನು ಪುನರ್‌ಸ್ಥಾಪಿಸಲಾಯಿತು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಪೊಲೀಸ್ ಅಧಿಕಾರಿ ಮತ್ತು ಮುಕುಲ್ ರಾಯ್ ಅವರನ್ನು ಪರಸ್ಪರರ ಎದುರು ನಿಲ್ಲಿಸಿ ವಿಚಾರಣೆ ನಡೆಸಲಾಯಿತು ಮತ್ತು ಅಪರಾಧವನ್ನು ಪುನರ್‌ಸ್ಥಾಪಿಸಿ ಅದರ ಚಿತ್ರೀಕರಣ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2014ರಲ್ಲಿ ನಾರದ ಘಟನೆ ನಡೆದ ಸಂದರ್ಭದಲ್ಲಿ ಎಸ್.ಎಂ.ಎಚ್ ಮಿರ್ಝಾ ಬುರ್ದ್ವಾನ್ ಜಿಲ್ಲೆಯ ಪೊಲೀಸ್ ಮುಖ್ಯಸ್ಥರಾಗಿದ್ದರು ಮತ್ತು ಮುಕುಲ್ ರಾಯ್‌ಗೆ ಬೃಹತ್ ಮೊತ್ತದ ನಗದನ್ನು ತಲುಪಿಸಿದ್ದರು ಎಂದು ಆರೋಪಿಸಲಾಗಿದೆ. ಕಳೆದ ವಾರ ಅವರನ್ನು ಬಂಧಿಸಲಾಗಿದ್ದು ಸದ್ಯ ಸೆಪ್ಟಂಬರ್ 30ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ.

ನಗದು ಪಡೆದ ಟಿಎಂಸಿ ನಾಯಕರಲ್ಲಿ ಆರು ಮಂದಿ ಸಂಸತ್ ಸದಸ್ಯರಾಗಿದ್ದರೆ ನಾಲ್ವರು ರಾಜ್ಯ ಸಚಿವರು ಮತ್ತು ಓರ್ವ ಶಾಸಕರಾಗಿದ್ದಾರೆ. ಹಣ ಪಡೆದ ಸಂಸದರಲ್ಲಿ ಸೌಗತಾ ರಾಯ್, ಸುವೇಂದು ಅಧಿಕಾರಿ, ಪ್ರಸೂನ್ ಬ್ಯಾನರ್ಜಿ, ಕಾಕೊಲಿ ಘೋಶ್ ದಸ್ತಿದರ್ ಮತ್ತು ಅಪರೂಪ ಪೊದ್ದರ್ ಸೇರಿದ್ದು ಸುಲ್ತಾನ್ ಅಹ್ಮದ್ ಅವರು ಮರಣ ಹೊಂದಿದ್ದಾರೆ. ಏಳನೇ ಸಂಸದ ಮುಕುಲ್ ರಾಯ್ ಆಗಿದ್ದು ಅವರು ನಂತರ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News