×
Ad

ವಿಶ್ವ ಹೃದಯ ದಿನದ ಅಂಗವಾಗಿ ಹೃದಯ ತಪಾಸಣಾ ಶಿಬಿರ

Update: 2019-09-29 19:47 IST

ಮಂಗಳೂರು, ಸೆ.29: ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಮತ್ತು ಹೃದ್ರೋಗಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ರವಿವಾರ ಉಚಿತ ಹೃದಯ ತಪಾಸಣಾ ಶಿಬಿರ ನಡೆಯಿತು.

ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಆರೋಗ್ಯದ ಕುರಿತು ಜನತೆ ವಿಶೇಷ ಕಾಳಜಿ ವಹಿಸಬೇಕು. ಹೃದಯ ಸಂಬಂಧಿ ಕಾಯಿಲೆಗಳು ಬಂದಾಗ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು. ಅನಾರೋಗ್ಯವನ್ನು ಎಂದೂ ನಿರ್ಲಕ್ಷಿಸಬಾರದು ಎಂದರು.

ಶಿಬಿರದಲ್ಲಿ 250ಕ್ಕೂ ಅಧಿಕ ಮಂದಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದರು. ಈ ಸಂದರ್ಭದಲ್ಲಿ ಮಣಿಪಾಲ್ ಅಕಾಡಮಿ ಆ್ ಹೈಯರ್ ಎಜುಕೇಶನ್-ಮಂಗಳೂರು ಕ್ಯಾಂಪಸ್‌ನ ಉಪ ಕುಲಪತಿ ಡಾ.ವಿ.ಸುರೇಂದ್ರ ಶೆಟ್ಟಿ, ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ಪ್ರಾದೇಶಿಕ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಆನಂದ್ ವೇಣುಗೋಪಾಲ್ ಮತ್ತು ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದಯ ರೋಗಶಾಸ ವಿಭಾಗದ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್ ಹಾಗೂ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ಧಿಕಿ ಉಪಸ್ಥಿತರಿದ್ದರು.

ಹೃದಯ ತಪಾಸಣೆ ನಂತರ ಪೋಸ್ಟರ್ ಸ್ಪರ್ಧೆಯನ್ನು ನಡೆಸಲಾಯಿತು. ‘ನನ್ನ ಹೃದಯ ನಿಮ್ಮ ಹೃದಯ’ ಎಂಬ ವಿಷಯದ ಕುರಿತ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಮೊದಲ ಬಹುಮಾನ ವಿಜೇತರಾದ ಲಲಿತಾ ರ್ನಾಂಡಿಸ್, ಅವರಿಗೆ 5 ಸಾವಿರ ನಗದು, ಎರಡನೇ ಬಹುಮಾನವಾದ 3000 ರೂ.ಗಳನ್ನು ಗ್ರೀಷ್ಮಾ ಜಿಎಸ್ ಮತ್ತು ಸಮಾಧಾನಕರ ಬಹುಮಾನವಾದ 2000 ರೂ.ಗಳನ್ನು ಸೌಗಂಧಿಕ ಗುರುರಾಜ್ ಪಡೆದುಕೊಂಡರು.

ಶಿಬಿರದಲ್ಲಿ ಪಾಲ್ಗೊಂಡವರಿಗೆ ಫಾಸ್ಟಿಂಗ್ ಬ್ಲಡ್ ಶುಗರ್, ಲಿಪಿಡ್ ಪ್ರೋಪೈಲ್, ಇಸಿಜಿ, ಎಕೊ ಮುಂತಾದ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News