ಉ.ಕ. ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ : ಅರ್ಜಿ ಆಹ್ವಾನ
ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆ ಮಿಲಾದುನ್ನಾಬಿ ಪ್ರಯುಕ್ತ ಉತ್ತರಕನ್ನಡ ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುತ್ತಿದ್ದು ಶಿಕ್ಷಕರು, ಉಪನ್ಯಾಸಕರು, ಲೇಖಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಬಹುದು ಎಂದು ‘ಸೀರತ್ ಪ್ರಬಂಧ ಸ್ಪರ್ಧೆಯ ಸಂಚಾಲಕ ಎಂ.ಆರ್.ಮಾನ್ವಿ ತಿಳಿಸಿದ್ದಾರೆ.
“ಪ್ರವಾದಿ ಮುಹಮ್ಮದ್(ಸ) ಮತ್ತು ಸಮಾನತೆ” ಎಂಬ ವಿಷಯದಲ್ಲಿ ನುಡಿ ಅಥವಾ ಯುನಿಕೋಡ್ ನಲ್ಲಿ 14 ಫಾಂಟ್ ಸೈಜ್ ನಲ್ಲಿ ಟೈಪ್ ಮಾಡಿ 3ಪುಟಗಳಿಗೆ ಮೀರದಂತೆ jihbklessay@gmail.com, yammarmanvi@gmail.com ಈಮೇಲ್ ಗೆ ಅ.31 ರ ಒಳಗೆ ಕಳುಹಿಸಿಕೊಡಬೇಕೆಂದು ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ಹಾಗೂ ಸಮಧಾನಕರ ಬಹುಮಾನ ನೀಡುತ್ತಿದ್ದು ಪ್ರಥಮ ರೂ.5000, ದ್ವಿತೀಯಾ ರೂ.3000 ಹಾಗೂ ತೃತೀಯಾ ರೂ.2000 ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9886455416ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಬಂಧಕ್ಕಾಗಿ ವಿಷಯವನ್ನು ಸಂಗ್ರಹಿಸುವಾಗ ನೇರವಾಗಿ ಯಾವುದಾದರೂ ಕೃತಿಯಿಂದ ಕಾಪಿ ಪೇಸ್ಟ್ ಮಾಡದೆ ಸ್ವತಂತ್ರವಾಗಿ ಬರೆಯ ತಕ್ಕದ್ದು ಅಲ್ಲದೆ ವಿಷಯ ಸಂಗ್ರಹಿಸಿದ ಮೂಲ ಕೃತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸತಕ್ಕದ್ದು. ಸ್ಪರ್ಧೆಗೆ ಕಳುಹಿಸಿದ ಪ್ರಬಂಧಗಳನ್ನು ಮರಳಿ ಕಳಿಸಿಕೊಡುವುದಿಲ್ಲ ಎಂದು ತಿಳಿಸಿದ್ದಾರೆ.