ಕಾಶ್ಮೀರದಲ್ಲಿ 370ನೆ ವಿಧಿ ಉಳಿಯಲು ಕಾಂಗ್ರೆಸ್ ನಿಂದ ಓಟ್ ಬ್ಯಾಂಕ್ ರಾಜಕೀಯ ಕಾರಣ -ಮುರಳೀಧರ ರಾವ್
ಮಂಗಳೂರು: ಕಾಶ್ಮೀರದಲ್ಲಿ ಕಾಂಗ್ರೆಸ್ ನ ಓಟ್ ಬ್ಯಾಂಕ್ ರಾಜಕಾರಣ ದಿಂದ 370ನೆ ವಿಧಿ ಉಳಿದುಕೊಂಡಿತ್ತು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ,ರಾಜ್ಯದ ಪ್ರಭಾರಿ ಮುರಳೀಧರ ರಾವ್ ತಿಳಿಸಿದ್ದಾರೆ.
ನಗರದ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿಂದು ಬಿಜೆಪಿ ವತಿಯಿಂದ ಹಮ್ಮಿಕೊಂಡ ಏಕದೇಶ ಏಕ ಸಂವಿಧಾನ ಅಭಿಯಾನದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿ ಮಾರ್ಪಡಿಸಲು ಸಂವಿಧಾನದ 370 ವಿಧಿಯನ್ನು ರದ್ದು ಪಡಿಸುವ ಆಶಯಹೊಂದಿದ್ದರು. ದೇಶದ ಏಕತೆ ಮತ್ತು ಅಖಂಡ ತೆಗಾಗಿ ಕಾಶ್ಮೀರಕ್ಕೆ ಸಂಬಂಧಿ ಸಿದಂತೆ 370 ವಿಧಿ ರದ್ದಾಗಿದೆ. ಮಹಾರಾಜ ಹರಿಸಿಂಗ್ ವಿಲೀನಕ್ಕೆ ಒಪ್ಪಿದಾಗ ಪ್ರತ್ಯೇಕ ಕತೆಯ ನಿಬಂಧನೆಗಳಿರಲಿಲ್ಲ. ಕಾಂಗ್ರೆಸ್ ನ ಹಲವು ಮುಖಂಡರು ಕಾಶ್ಮೀರ ಕ್ಕೆ ಪ್ರತ್ಯೇಕ ಸಂವಿಧಾನವನ್ನು ಒಪ್ಪಿರಲಿಲ್ಲ. ಆದರೆ ನೆಹರು ಅವರ ಮುತುವರ್ಜಿಯಿಂದ ಸಂವಿಧಾನದ 370ವಿಧಿಯನ್ನು ತಾತ್ಕಾಲಿಕ ವಾಗಿ ಸೇರ್ಪಡೆ ಗೊಳಿಸಲಾಯಿತು. ಸಂವಿಧಾನದ 370 ವಿಧಿಯ ಮೂಲಕ ಕಾಶ್ಮೀರ ಕ್ಕೆ ಪ್ರತ್ಯೇಕ ಸ್ಥಾನ ಮಾನ ನೀಡಿರುವುದು ಕಾಂಗ್ರೆಸ್ ನಾಯಕರಿಂದ ಇತಿಹಾಸದಲ್ಲಾಗಿರುವ ಪ್ರಮಾದ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಆಯಾಪ್ರದೇಶದ ಭಾಷೆ, ಸಂಸ್ಕ್ರತಿ ರಕ್ಷಣೆಗೆ ಅವಕಾಶವಿದೆ. ಪ್ರತ್ಯೇಕ 370 ವಿಧಿಯ ಅಗತ್ಯವಿಲ್ಲ. ಕಾಶ್ಮೀರದಲ್ಲಿ ಕಳೆದ 70 ವರ್ಷದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ, ಹಿಂದುಳಿದವರಿಗೆ ಯಾವೂದೇ ಮೀಸಲಾತಿ ಸೌಲಭ್ಯ ದೊರೆಯಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಮತ್ತು ಕಮ್ಯನಿಸ್ಟ್ ಕಾಶ್ಮೀರದ ಸಮಸ್ಯೆಯ ಯ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಮುರಳೀಧರ ರಾವ್ ತಿಳಿಸಿದರು.
ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಭೆಯನ್ನು ದ್ದೇಶಿಸಿ ಮಾತನಾಡುತ್ತಾ, ಕಾಶ್ಮೀರದಲ್ಲಿ 370ನೆ ವಿಧಿಯ ರದ್ದಾಗಿರುವ ದಿನ ಆ.5 ಕಾಶ್ಮೀರ ಜನತೆಗೆ ಸ್ವಾತಂತ್ರ್ಯ ದೊರೆತ ದಿನ ಎನ್ನಬಹುದು. ಇನ್ನು ಮುಂದೆ ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ನಾಮ ವಾಗಲಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಡಾ.ಭರತ್ ಶೆಟ್ಟಿ, ಬಿಜೆಪಿ ಮುಖಂಡರಾದ ಉದಯ ಕುಮಾರ್, ಮೀನಾಕ್ಷಿ ಶಾಂತಿ ಗೋಡು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.