ಬಬ್ಬುಕಟ್ಟೆ: ವಿ.ಎಚ್.ಅಬ್ದುರ್ರಹ್ಮಾನ್ ನಿಧನ
Update: 2019-09-29 21:48 IST
ಮಂಗಳೂರು, ಸೆ. 29: ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆ ನಿವಾಸಿ ವಿ.ಎಚ್.ಅಬ್ದುರ್ರಹ್ಮಾನ್(63) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಅಪರಾಹ್ನ 3 ಗಂಟೆಯ ಸುಮಾರಿಗೆ ನಿಧನರಾಗಿದ್ದಾರೆ.
ಮೃತರು ಆರು ಮಂದಿ ಮಕ್ಕಳ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯವು ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಚೊಂಬುಗುಡ್ಡೆ ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.