ಇಂಡಿಯನ್ ಸೋಶಿಯಲ್ ಫಾರಮ್‌ನಿಂದ ಸೌದಿ ರಾಷ್ಟ್ರೀಯ ದಿನ ಆಚರಣೆ

Update: 2019-09-29 16:25 GMT

ದಮಾಮ್ : ಇಂಡಿಯನ್ ಸೋಶಿಯಲ್ ಫಾರಮ್ 89ನೇ ಸೌದಿ ರಾಷ್ಟ್ರೀಯ ದಿನವನ್ನು ಆಚರಿಸಿ ಸೌದಿ ಸಮಾಜ ಮತ್ತು ಭಾರತೀಯ ಸಮುದಾಯದ ನಡುವಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಎತ್ತಿಹಿಡಿಯಿತು.

ಸೌದಿ ಮೂಲದ ನ್ಯಾಯವಾದಿ ಸಯೀದ್ ಅಹ್ಮದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸೌದಿ ಅರೇಬಿಯಾ ಮತ್ತು ಭಾರತದ ನಡುವೆ ಇರುವ ದ್ವಿಪಕ್ಷೀಯ ಸಂಬಂಧ ಸಮೃದ್ಧಗೊಳ್ಳುತ್ತಿದೆ ಮತ್ತು ಎರಡೂ ದೇಶಗಳಿಗೆ ಲಾಭದಾಯಕವಾಗಿದೆ ಎಂದು ಅವರು ತಿಳಿಸಿದರು. ನಂತರ ಮಾತನಾಡಿದ ಇಂಡಿಯನ್ ಸೋಶಿಯಲ್ ಫಾರಮ್‌ನ ಕೇಂದ್ರ ಸಮಿತಿ ಕಾರ್ಯದರ್ಶಿ ತಾಹಿರ್ ಹೈದರಾಬಾದ್, ಸೌದಿ ಅರೇಬಿಯದಲ್ಲಿ ಅತೀದೊಡ್ಡ ವಿದೇಶಿ ಸಮುದಾಯವಾಗಿರುವ ಭಾರತೀಯರು ಪ್ರಾಮಾಣಿಕವಾಗಿ ಸೌದಿಯನ್ನು ತಮ್ಮ ಎರಡನೇ ಮನೆಯೆಂದು ಪರಿಗಣಿಸುತ್ತಾರೆ ಎಂದು ತಿಳಿಸಿದರು.

ಇಂಡಿಯನ್ ಫ್ರೆಟರ್ನಿಟಿ ಫಾರಮ್‌ನ ಪೂರ್ವ ವಲಯದ ಪ್ರಧಾನ ಕಾರ್ಯದರ್ಶಿ ಅಬ್ದುಸಲಾಮ್ ಮಾಸ್ಟರ್, ಮುಖ್ಯ ಅತಿಥಿ ನ್ಯಾಯವಾದಿ ಸಯೀದ್ ಅಹ್ಮದ್ ಅವರಿಗೆ ಹೂಗುಚ್ಛ ನೀಡಿದರು. ಇಂಡಿಯನ್ ಸೋಶಿಯಲ್ ಫಾರಮ್‌ನ ಪ್ರಧಾನ ಕಾರ್ಯದರ್ಶಿ ಅಶ್ರಫ್ ಪುತ್ತೂರು ಅತಿಥಿಗಳನ್ನು ಮತ್ತು ಸಭಿಕರನ್ನು ಸ್ವಾಗತಿಸಿದರು.

ಹೈದರಾಬಾದ್‌ನ ಮಸೂರ್ ಶಾ, ಕೇರಳದ ಶೆರ್ನಾಸ್ ಅಶ್ರಫ್, ಕರ್ನಾಟಕದ ಸಲಹುದ್ದೀನ್, ತಮಿಳುನಾಡಿನ ಹಬೀಬ್ ಹಾಗೂ ಕೇರಳದ ನಮೀರ್ ಚೆರುವಡಿ ಅವರನ್ನೂ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News