ಕಟ್ಟೇಕಾರ್ ಅಬ್ಬಾಸ್ ಹಾಜಿ ನಿಧನ

Update: 2019-09-29 17:22 GMT

ಸುಳ್ಯದ ಹಿರಿಯ ಮುಖಂಡ, ಉದ್ಯಮಿ ಕಟ್ಟೇಕಾರ್ ಅಬ್ಬಾಸ್ ಹಾಜಿ ( 73) ರವಿವಾರ ರಾತ್ರಿ ನಿಧನರಾದರು.

ಸುಳ್ಯದ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಹಿರಿಯ ಮುಖಂಡರಾಗಿದ್ದ ಅವರು, ಕಟ್ಟೇಕಾರ್ಸ್ ಗ್ರೂಪ್ ನ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದರು.

ಸುಳ್ಯ ಗಾಂಧೀನಗರ ಸರಕಾರಿ ಪ್ರೌಢ ಶಾಲೆ,  ಜುಮಾ ಮಸೀದಿ, ಅನಾಥಾಲಯ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ತಮ್ಮನ್ನು  ತೊಡಗಿಸಿಕೊಂಡಿದ್ದ ಅವರು, ಹಲವು ಸಂಘ ಸಂಸ್ಥೆಗಳಿಗೆ ಪ್ರೇರಣಾ ಶಕ್ತಿಯಾಗಿದ್ದರು. ಜನಪರ ಚಳುವಳಿಗಳಲ್ಲಿ ಮುಂಚೂಣಿಯಲ್ಲಿದ್ದ ಅಬ್ಬಾಸ್  ಹಾಜಿ ಅವರು, ಸರ್ವ ಧರ್ಮೀಯರಲ್ಲೂ ಅಪಾರ ಗೌರವ ಹೊಂದಿದ್ದರು.

ಅಬ್ಬಾಸ್ ಹಾಜಿ ಅವರ ಹಿರಿಯ ಪುತ್ರ 9 ತಿಂಗಳ ಹಿಂದೆಯಷ್ಟೇ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News